ನಾಗರಿಕಾ ಸೇವಾ ಪರೀಕ್ಷೆಗೆ ತರಬೇತಿ

 

ಕಲಬುರಗಿ ಜು 10: ಐಎಎಸ್,ಐಪಿಎಸ್, ಕೆಎಎಸ್ ನಂತಹ ನಾಗರಿಕ ಸೇವಾಪರೀಕ್ಷೆ ( ಸಿವಿಲ್ ಸರ್ವಿಸ್ ) ಬರೆಯುವ  ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಸಮುತ್ಕರ್ಷ ಅಧ್ಯಯನ ಕೇಂದ್ರವು ಹುಬ್ಬಳ್ಳಿಯಲ್ಲಿ ಅಧ್ಯಯನ ಮತ್ತು ತರಬೇತಿ ಕೇಂದ್ರ ಆರಂಭಿಸಿದೆ.

ದೆಹಲಿಯಿಂದ ಆಗಮಿಸುವ ತಜ್ಞ ಉಪನ್ಯಾಸಕರು ತರಬೇತಿ ನೀಡುವರು. ಲೈಬ್ರರಿ,ಹಾಸ್ಟೆಲ್ ಸೌಲಭ್ಯದೊಂದಿಗೆ ಹಿರಿಯ ಅಧಿಕಾರಿಗಳ ವಿಶೇಷ ಮಾರ್ಗದರ್ಶನ,ಸಂವಾದ ಏರ್ಪಡಿಸಲಾಗುವದು ಎಂದು ಸಮುತ್ಕರ್ಷ ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಶಾನಭಾಗ  ಮತ್ತು ಸಹಕಾರ್ಯದರ್ಶಿ ವಿನೋದ ದೇಶಪಾಂಡೆ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿ ಮಾದರಿಯ ಪೂರ್ಣ ಪ್ರಮಾಣದ ಸಮುತ್ಕರ್ಷ ತರಬೇತಿ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕ ವಿಧಿಸುತ್ತಿದೆ.ಅಗಸ್ಟ ತಿಂಗಳಿಂದ ತರಬೇತಿ ಆರಂಭವಾಗಲಿದೆ.  ಮಾಹಿತಿಗೆ 9663424767 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದರು..

Leave a Comment