ನಾಂದೇಡ್ ಸಾಧು ಹತ್ಯೆ ; ಹಂತಕನ ಸೆರೆ ಹಿಡಿದ ತೆಲಂಗಾಣ ಪೊಲೀಸರು

ಮುಂಬೈ, ಮೇ ೨೪- ಮಹಾರಾಷ್ಟ್ರದ ನಾಂದೇಡ್ ಆಶ್ರಮದಲ್ಲಿ ಶಿವಾಚಾರ್ಯ ಎಂಬ ಸಾಧುವಿನೊಂದಿಗೆ ಭಗವಾನ್ ಷಿಂದೆ ಎಂಬ ಮತ್ತೊಬ್ಬ ವ್ಯಕ್ತಿಯನ್ನೂ ಹತ್ಯೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ತೆಲಂಗಾಣ ಪೊಲೀಸರು ಸೆರೆ ಹಿಡಿದಿದ್ದಾರೆ.
ಹಂತಕನನ್ನು ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರುನಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ವಿಚಾರಣೆಯ ನಂತರ ಹಂತಕನನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹಣ,ಚಿನ್ನಕ್ಕಾಗಿ ಸಾಧು ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ನಡೆಸಿದ್ದಾಗಿ ಪೊಲೀಸರ ವಿಚಾರಣೆಯಲ್ಲಿ ಆತ ಬಾಯಿಬಿಟ್ಟಿದ್ದಾನೆ.
ನಾಂದೇಡ್ ಆಶ್ರಮದಲ್ಲಿ ಸ್ನಾನದ ಕೊಠಡಿಯಲ್ಲಿ ಸ್ವಾಮಿ ಶಿವಾಚಾರ್ಯ ಅವರೊಂದಿಗೆ ಭಗವಾನ್ ಷಿಂಡೆ ಎಂಬ ವ್ಯಕ್ತಿಯ ಮೃತ ದೇಹಗಳು ಪತ್ತೆಯಾಗಿದ್ದು,ಇಬ್ಬರನ್ನೂ ಕತ್ತುಸೀಳಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಹಣ ಚಿನ್ನ ದೊಂದಿಗೆ ಮೃತ ದೇಹವನ್ನು ಕಾರಿನಲ್ಲಿ ಹೊತ್ತೊಯ್ಯಲು ಹಂತಕ ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಅಡ್ಡಗಟ್ಟಿದ್ದರು. ಇದರಿಂದ ಹೆದರಿ ಸ್ಥಳದಿಂದ ಪರಾರಿಯಾಗಿದ್ದ ಹಂತಕ ನಿರ್ಮಲ್ ಜಿಲ್ಲೆ ತಾನೂರು ತಲುಪಿದ್ದ. ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡುತ್ತಿದ್ದಂತೆ ತೆಲಂಗಾಣ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಹಂತಕನನ್ನು ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ

Share

Leave a Comment