ನವ ಕಾಶ್ಮೀರ ನಿರ್ಮಾಣ ಮಾಡೋಣ: ಪಂಡಿತರಿಗೆ ಪ್ರಧಾನಿ ಅಭಯ

ಹ್ಯೂಸ್ಟನ್‌, ಸೆ. ೨೨- ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಸಾಕಷ್ಟು ನೋವು ಅನುಭವಿಸಿದ್ದೀರಿ, ನವ ಕಾಶ್ಮೀರ ನಿರ್ಮಾಣ ಮಾಡೋಣ ಎಂಬ ಭರವಸೆ ನೀಡಿದ್ದಾರೆ.
ಇಲ್ಲಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅಮೆರಿಕದ ಹೂಸ್ಟನ್‌ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿಯಾಗಿ ಸಂವಾದ ನಡೆಸಿದರು.
ಈ ವೇಳೆ ಕಾಶ್ಮೀರಿ ಪಂಡಿತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನೀವು ಸಾಕಷ್ಟು ನೋವು ಅನುಭವಿಸಿದ್ದೀರಿ. ಇನ್ನು ಮುಂದೆ ನಾವು ಎಲ್ಲರೂ ಸೇರಿ ನವ ಕಾಶ್ಮೀರವನ್ನು ನಿರ್ಮಾಣ ಮಾಡೋಣ ಎಂದು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರೊಬ್ಬರು ಪ್ರಧಾನಿ ಮೋದಿಯವರ ಕೈಗೆ ಮುತ್ತನ್ನಿಟ್ಟು 7 ಲಕ್ಷ ಕಾಶ್ಮೀರಿ ಪಂಡಿತರ ಪರವಾಗಿ ಧನ್ಯವಾದ ಅರ್ಪಿಸಿದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಲು ತೆಗೆದುಕೊಂಡ ದಿಟ್ಟ ನಿರ್ಧಾರಕ್ಕಾಗಿ ಕಾಶ್ಮೀರಿ ಪಂಡಿತರ ನಿಯೋಗ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು.

ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೊಡಿಸಿ ಮೋದಿಗೆ ಮನವಿ
ಪ್ರಧಾನಿ ಮೋದಿ ಅವರನ್ನು ಹ್ಯೂಸ್ಟರ್ ನಲ್ಲಿ ಭೇಟಿ ಮಾಡಿದ ಬೋಹ್ರಾ ಮುಸ್ಲಿಮರ ನಿಯೋಗ ಸಿಖ್ ಸಮುದಾಯವು ಪ್ರಧಾನಿ ಮೋದಿ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, 1984 ರ ಸಿಖ್ ನರಮೇಧದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿತು.
ಇದೇ ಸಂದರ್ಭದಲ್ಲಿ ದೆಹಲಿ ವಿಮಾನ ನಿಲ್ದಾಣದ ಹೆಸರನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುನಾನಕ್ ದೇವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಿಖ್ ಸಮುದಾಯ ಒತ್ತಾಯಿಸಿತು.

ಮೋದಿಗೆ ಭವ್ಯ ಸ್ವಾಗತ
ಹ್ಯೂಸ್ಚನ್, ಸೆ. ೨೨- “ಹೌಡಿ ಮೋದಿ” ಮೆಗಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳೆದ ರಾತ್ರಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ಇಲ್ಲಿಯ ಜಾರ್ಜ್ ಬುಷ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಅಮೇರಿಕಾದ ವಾಣಿಜ್ಯ ಮತ್ತು ಅಂತರ ರಾಷ್ಟ್ರೀಯ ವ್ಯವಹಾರಗಳ ಮಹಾ ನಿರ್ದೇಶಕ ಕ್ರಿಸ್ಟೋಫರ್ ಓಲ್ ಸನ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಭಾರತದಲ್ಲಿಯ ಅಮೇರಿಕಾದ ರಾಯಭಾರಿ ಕೆನ್ನೆಪ್ ಜಸ್ಟರ್ ಮತ್ತು ಅಮೇರಿಕಾದಲ್ಲಿಯ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಹಾಜರಿದ್ದರು.
ಮೋದಿ ಆಗಮನದ ನಿರೀಕ್ಷೆಯಲ್ಲಿದ ಸಾವಿರಾರು ಭಾರತೀಯ ಸಮುದಾಯದವರು ಪ್ರಧಾನಿ ಮೋದಿ ತಾವು ತಂಗಲಿರುವ ಇಲ್ಲಿಯ ಪೋಸ್ಟ್ ಓಕ್ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ಅದರ ಹಿಂಭಾಗದಲ್ಲಿ ನೆರೆದಿದ್ದ ಸಾವಿರಾರು ಮಂದಿ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು.
ಭಾರತ ಹಾಗೂ ಅಮೇರಿಕಾ ಧ್ವಜಗಳನ್ನು ಕೈಯಲ್ಲಿ ಹಿಡಿದು ಮೋದಿ, ಮೋದಿ ಎಂದು ಕೂಗಿ ತಮ್ಮ ಹರ್ಷ ವ್ಯಕ್ತಪಡಿಸಿದರು.

ಟಿಕೇಟ್ ಸೋಲ್ಡ್ ಔಟ್
ಹ್ಯೂಸ್ಟರ್, ಸೆ. ೨೨- ಇಂದು ರಾತ್ರಿ ಇಲ್ಲಿಯ ಎನ್.ಆರ್.ಜಿ. ಪುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುವ ಮೋದಿ ಅವರ ಬೃಹತ್ ಱ್ಯಾಲಿಯ ಟಿಕೆಟ್ ಗಳು ಪೂರ್ಣವಾಗಿ ಮಾರಾಟ ವಾಗಿವೆ. ಈ ಕ್ರೀಡಾಂಗಣದಲ್ಲಿ 50, 000 ಆಸನಗಳ ವ್ಯವಸ್ಥೆಯಿದ್ದು ಎಲ್ಲಾ ಆಸನಗಳು ಈಗಾಗಲೇ ತುಂಬಿರುವುದರಿಂದ ಟಿಕೇಟ್ ಸೋಲ್ಡ್ ಔಟ್ ಫಲಕಗಳನ್ನು ನೇತು ಹಾಕಲಾಗಿದೆ.
ಅಮೇರಿಕಾ ನೆಲದಲ್ಲಿ ಕ್ರೈಸ್ತರ ಪರೋಮೋಚ್ಛ ಗುರು ಪೋಪ್ ಅವರ ನಂತರ ಅತಿ ಹೆಚ್ಚು ಜನ ಸಂದಣಿ ಸೇರಿರುವ ಈ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ರಾತ್ರಿ 10 ಗಂಟೆಗೆ ಮಾತನಾಡಲಿದ್ದಾರೆ.
ಇಂದು ರಾತ್ರಿ 8.30 ರಿಂದ ಆರಂಭವಾಗುವ 3 ಗಂಟೆಗಳ ಈ ಮೆಗಾ ಕಾರ್ಯಕ್ರಮದಲ್ಲಿ ಮೊದಲಿಗೆ 27 ಕಲಾ ತಂಡಗಳ 400 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಾತ್ರಿ 9.30ಕ್ಕೆ ಅಧ್ಯಕ್ಷ ಟ್ರಂಪ್ ಅಲ್ಲಿ ನೆರೆದಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ಭಾಷಣ ಹಿಂದಿ, ಇಂಗ್ಲಿಷ್, ಮತ್ತು ಸ್ಪಾನೀಶ್ ಭಾಷೆಯಲ್ಲಿ ನೇರ ಪ್ರಸಾರದ ವ್ಯವಸ್ಥೆ ಆಗಿದೆ.

Leave a Comment