ನವೋದಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ

ರಾಯಚೂರು.ಫೆ.19- ನವೋದಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫೆ.17 , 18 ರಂದು ವಿವಿಧ ವಿಭಾಗಗಳ ಇಂಜಿನಿಯರಿಂಗ್ ಕೊನೆ ವರ್ಷದ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಶನಕ್ಕೆ ಬೆಂಗಳೂರಿನ ಪ್ರಖ್ಯಾತಾ ಸಂಸ್ಥೆಯಾದ ಟೆಕ್ ಫಾರ್ಚ್ಯೂನ್ ಇವರ ಟೆಕ್ ಫಾರ್ಚ್ಯೂನ್ ಅಕಾಡೆಮಿ ಅಂಡ್ ಕ್ಯಾಡ್ ವಿಷನ್ ಪ್ರೈವೇಟ್ ಲಿಮಿಟೆಡ್ ಇವರು ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡಿದರು. ಈ ಸಂದರ್ಶನದಲ್ಲಿ ಕಾಲೇಜಿನ ಅಂತಿಮ ವರ್ಷದ ಒಟ್ಟು 180ವಿದ್ಯಾರ್ಥಿಗಳು ಭಾಗಿಯಾಗ್ಗಿದ್ದರು .ಇದರಲ್ಲಿ ಒಟ್ಟು 13 ವಿದ್ಯಾರ್ಥಿಗಳು ಉದ್ಯೋಗ ಆವಕಾಶ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಶನಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿರುವ ಟೆಕ್ ಫಾರ್ಚ್ಯೂನ್ ಸಂಸ್ಥೆಗೆ ಕಾಲೇಜಿನ ಪ್ರಾಂಶುಪಾಲುರಾದ ಡಾ.ಎಂ.ವಿ. ಮಲ್ಲಿಕಾರ್ಜುನ ಹಾಗೂ ನವೋದಯ ಟ್ರೇನಿಂಗ್ ಅಂಡ್ ಪ್ಲೇಸ್ಮೆಂಟ್ ಮುಖ್ಯಸ್ಥರಾದ ಡಾ.ರತ್ನಕುಮಾರ್ ಇವರು ಧನ್ಯವಾದ ಸೂಚಿಸಿದರು. ಈ ಸಂದರ್ಶನವನ್ನು ಆಯೋಜಿಸಲು ಅನುಮತಿ ನೀಡಿದ ನವೋದಯ ಸಂಸ್ಥೆಯ ಮುಖ್ಯಸ್ಥರಿಗೆ ಕಾಲೇಜಿನ ಪ್ರಾಂಶುಪಾಲರು ಧನ್ಯವಾದ ಸೂಚಿಸಿದರು.

Leave a Comment