ನವವಧುವಿನ ಅಪಹರಿಸಿ ಗ್ಯಾಂಗ್‌ರೇಪ್!

ಮದುವೆಯ ಮರುದಿನವೇ ದುಷ್ಕರ್ಮಿಗಳಿಂದ ಕೃತ್ಯ
ಲಕ್ನೋ, ಜ.೨೦- ಮದುವೆಯ ಮರುದಿನವೇ ದುಷ್ಕರ್ಮಿಗಳ ತಂಡ ನವವಧುವನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಜನವರಿ ೧೭ರಂದು ಸಂತ್ರಸ್ತ ಯುವತಿ ಮದುವೆಯಾಗಿದ್ದು ಮರುದಿನವೇ ಇಬ್ಬರು ಕಾಮುಕರು ಆಕೆಯನ್ನು ಪತಿಯ ಮನೆಯಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ನಿನ್ನೆ ಹಾಪುರದ ಬ್ಯಾಂಕ್ ಬಳಿ ಮಹಿಳೆ ಪತ್ತೆಯಾಗಿದ್ದಳು.
ಮಹಿಳೆ ನಾಪತ್ತೆಯಾಗುತ್ತಿದ್ದಂತೆ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಹಾಪುರದ ಬ್ಯಾಂಕ್ ಬಳಿ ಪತ್ತೆ ಮಾಡಿದ್ದಾರೆ. ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಇವರೆಗೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಮಹಿಳೆಯನ್ನು ವೈದ್ಯಕೀಯ ಪರೀಕ್ಷಗೆ ಕಳುಹಿಸಲಾಗಿದ್ದು ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಡಿಎಸ್‌ಪಿ ರಾಜೇಶ್ ಸಿಂಗ್ ಪ್ರತಿಕ್ರಿಯಿಸಿ ಯುವತಿ ಜ.೧೮ರ ಬೆಳಗ್ಗೆಯಿಂದ ಕಾಣೆಯಾಗಿದ್ದಳು. ಮಹಿಳೆ ಕಾಣೆಯಾಗಿರುವುದನ್ನು ನೋಡಿ ಪತಿಮನೆಯವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ನಿನ್ನೆ ನಾವು ಮಹಿಳೆಯನ್ನು ಪತ್ತೆ ಮಾಡಿದ್ದೇವೆ. ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಕುಟುಂಬಸ್ಥರ ದೂರಿನ ಮೇರೆಗೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Leave a Comment