ನವಲಿ ಗ್ರಾಮದ ಬಳಿ ತುಂಗಭದ್ರೆಗೆ ಸಮಾನಾಂತರ ಜಲಾಶಯ: ಡಿಕೆಶಿ

ಬೆಂಗಳೂರು, ಜು 16 – ತುಂಗಭದ್ರಾ ಜಲಾಶಯಶದಿಂದ ಹೂಳು ತೆಗೆಯುವ ಸಂಬಂಧ ರಾಜ್ಯ ಸರ್ಕಾರ ಪ್ರಸ್ತಾವನೆ ತಯಾರಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಹೂಳು ತುಂಬಿರುವುದರಿಂದ ನೀರು ಸಂಗ್ರಹಣೆ ಕಷ್ಟವಾಗಿದೆ. ಹೀಗಾಗಿ ಹೂಳು ತೆಗೆಯುವ ಪ್ರಸ್ತಾವನೆ ತಯಾರು ಮಾಡಲಾಗಿದೆ ಎಂದು ಹೇಳಿದರು. ತುಂಗಭದ್ರೆಗೆ ಸಮಾನಾಂತರ ಜಲಾಶಯವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಬಳಿ ನಿರ್ಮಿಸುವುದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.
ತುಂಗಭದ್ರ ಯೋಜನೆ ಅಂತಾರಾಜ್ಯ ಯೋಜನೆಯಾಗಿರುವ ಕಾರಣ, ಇದು ಆಂಧ್ರಪ್ರದೇಶ, ತೆಲಂಗಾಣ ಸರ್ಕಾರಗಳ ಪರಿಶೀಲನೆಯಲ್ಲಿದೆ. ಯೋಜನಾ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಲಾಗಿದೆ ಎಂದೂ ಸಚಿವರು ಉತ್ತರಿಸಿದರು.

Leave a Comment