ನವರಾತ್ರಿಯಲ್ಲಿ ಅವಂತಿ

ಚಂದನವನದಲ್ಲಿ ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೊ ಯಾರೊ ಗಾಳಿಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆ ಇಟ್ಟು ಇಲ್ಲೆ ಇದಂಗಿದ್ದು ಎದ್ದು ಹೋದೊರ್ ಯಾರೊ ಎಂದು ಮನಕದ್ದಿದ್ದ ಚೆಲುವೆ ಹೃದಯ ಅವಂತಿ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.

ಒರಟ ಐ ಲವ್ ಯೂ ಹಾಗೂ ತ್ರಾಟಕ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ನಟಿ ಹೃದಯ ಅವಂತಿ ಇದೀಗ ನವರಾತ್ರಿ ಚಿತ್ರದಲ್ಲಿ ನಟಿಸುತ್ತಿದ್ದು, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡದಲ್ಲಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಲಕ್ಷ್ಮೀಕಾಂತ್ ಚೆನ್ನ ನಿರ್ದೇಶನದ ‘ನವರಾತ್ರಿ’ ಚಿತ್ರ ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿದ್ದು, ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ.

ನವರಸಗಳಿಂದ ಕೂಡಿದ ಪಾತ್ರವನ್ನು ಮಾಡುತ್ತಿರುವ ನಾಯಕಿಯೂ ಈ ಚಿತ್ರದಲ್ಲಿ ಮಾರ್ಡನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದ್ದೂ, ನವರಸಗಳಿಂದ ಕೂಡಿದ ಅಂಶಗಳನ್ನು ಒಳಗೊಂಡಿದೆ. ಇಲ್ಲಿ ದೇವರು ಹಾಗೂ ದೆವ್ವ ಎರಡು ಅಂಶಗಳು ಪ್ರಮುಖವಾದ ಪಾತ್ರವನ್ನು ವಹಿಸಿದೆ. ಪದ್ಮವಾತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ನಾಯಕನಾದರೆ, ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಂದು ಫೈಟ್ ಒಳಗೊಂಡಿದ್ದೂ, ಯಾವುದೇ ರೀತಿಯ ಹಾಡಿಲ್ಲದಿರುವುದೇ ಚಿತ್ರದ ವಿಶೇಷವಾಗಿದೆ.

ಸಂಗೀತ ನಿರ್ದೇಶಕರಾಗಿ ತೆಲುಗು ಸಿನಿಮಾ ‘ಛೋಟಾ ಭೀಮ್’ ಹಾಗೂ ‘ಮನು’ ಖ್ಯಾತಿಯ ನರೇಶ್ ಕುಮಾರನ್ ಸಂಯೋಜನೆ ಮಾಡಿದ್ದಾರೆ. ಚಿತ್ರವೂ ೧. ೫೫ ನಿಮಿಷಗಳನ್ನು ಒಳಗೊಂಡಿದ್ದೂ, ಸಂಕಲನವು ಲೋಕೇಶ್ ಚೆನ್ನ ಹಾಗೂ ಛಾಯಾಗ್ರಹಣ ಸಂಕಲನವನ್ನು ಅನ್ನಪೂರ್ಣ ಸ್ಟುಡಿಯೋಸ್ ಮಾಡಿದೆ.

ಫ್ಯಾಂಟಸಿ ಥ್ರಿಲ್ಲರ್ ಜಾನರ್ನ ‘ನವರಾತ್ರಿ’ ಶೀರ್ಷಿಕೆ ಹೊಂದಿರುವ ಸಿನಿಮಾವೂ ಸದ್ದಿಲ್ಲದೇ ಸ್ಯಾಂಡಲ್‌ವುಡ್ ನಲ್ಲಿ ಚಿತ್ರೀಕರಣವನ್ನು ಮುಗಿಸಿದ್ದೂ, ಶೀಘ್ರದಲ್ಲಿಯೇ ತೆರೆಗೆ ಬರಲು ಚಿತ್ರತಂಡವೂ ಬರದಿಂದ ತಯಾರಿ ನಡೆಸಿಕೊಳ್ಳುತ್ತಿದೆ. ಇದೊಂದು ಥ್ರಿಲ್ಲರ್ ಕಥೆಯಿಂದ ಕೂಡಿದ್ದೂ, ಇಲ್ಲಿ ದೆವ್ವ ಹಾಗೂ ದೈವವೂ ಕೂಡ ಇದೆ. ನವರಾತ್ರಿ ಎಂಬುದು ಇಲ್ಲಿ ಪ್ರಮುಖವಾದಂತಹ ಅಂಶವಾಗಿದ್ದೂ, ಕಥೆಗೆ ಸಸ್ಪೆನ್ಸ್ ನೀಡಲಿದೆ.

Leave a Comment