ನವರಸಗಳ ಪಾದರಸ

ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ’ಪಾದರಸ’ ಚಿತ್ರ ಮುಂದಿನ ವಾರ ತೆರೆಗೆ ಬರಲು ಸಜ್ಜಾಗಿದೆ.ವಿಭಿನ್ನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದು, ಚಿತ್ರರಂಗದಲ್ಲಿ ಹೊಸದೊಂದು ಆಯಾಮ ನೀಡಲಿದೆ ಎನ್ನುವ ವಿಶ್ವಾಸ ಸಂಚಾರಿ ವಿಜಯ್ ಅವರದು.

ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ವೇಳೆ ಮಾತಿಗಿಳಿದ ನಟ ಸಂಚಾರಿ ವಿಜಯ್, ಮೂರು ವರ್ಷಗಳ ಶ್ರಮ ಫಲ ಕೊಡುವ ಹಂತಕ್ಕೆ ಬಂದಿದೆ. ಯುವ ಜನತೆಗೆ ಇಷ್ಟಪಡುವ ಸಂಭಾಷಣೆ ಚಿತ್ರದಲ್ಲಿದೆ. ಸಂಪೂರ್ಣ ಮನರಂಜನೆಗೆ ಒತ್ತು ನೀಡಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಹಾಸ್ಯ,ತುಂಟತನ, ಪೋಲಿತನವೂ ಇದೆ.ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಹೃಷಿಕೇಷ್ ಜಂಬಗಿ,ಎಲ್ಲರಲ್ಲೂ ಕೆಟ್ಟದ್ದು, ಒಳ್ಳೆಯ ಗುಣಗಳು ಇರುತ್ತದೆ. ಬೆಳೆಯುವ ಮಕ್ಕಳು ಸಮಾಜಕ್ಕೆ ಮಾರಕವಾಗ್ತಾರಾ, ಪೂರಕವಾಗಿರುತ್ತರಾ ಎಂಬುದನ್ನು  ಚಿತ್ರದಲ್ಲಿ ಹೇಳಲಾಗಿದೆ.ಯಾರಿಗೆ ಬೇಕಾದರೂ ಅನ್ಯಾಯ ಮಾಡಬಹುದು. ನಮ್ಮ ಮನಸ್ಸಾಕ್ಷಿಗೆ ಮೋಸ ಮಾಡಲು, ಆಗುವುದಿಲ್ಲ. ಪೋಸ್ಟರ್‌ದಲ್ಲಿ ಇಬ್ಬರು ನಾಯಕಿಯರು ಇದ್ದರೂ, ಸಿನಿಮಾದಲ್ಲಿ ಅಷ್ಟ ನಾಯಕಿಯರು ಇದ್ದಾರೆ.ನಾಯಕನ ಗುಣಕ್ಕೆ ಅನುಗುಣವಾಗಿ ಡಬ್ದಲ್ ಮೀನಿಂಗ್ ಅಗತ್ಯವಾಗಿದೆ ಎಂದು ಸಮಜಾಯಿಷಿ ನೀಡಿದರು.

ಇಬ್ಬರು ಅನಾಥ ಹುಡುಗರು ಯಾರ ಪ್ರೀತಿ, ಹಂಗು ಇಲ್ಲದೆ ಬೆಳೆಯುತ್ತಾ ತಮ್ಮ ದಾರಿಯನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ ಎಂದು ವಿವರ ನೀಡಿದರು ನಿರ್ದೇಶಕರು.

ನಿರ್ಮಾಪಕರಲ್ಲಿ ಒಬ್ಬರಾದ ಕೃಷ್ಣರೇವುಕರ್, ಆರಂಭದಲ್ಲಿ ಸಂಚಾರಿವಿಜಯ್ ಅವರನ್ನು ಜನ  ಬೈದುಕೊಳ್ಳುತ್ತಾರೆ, ವಿರಾಮದ ನಂತರ ಮನುಷತ್ವಕ್ಕೆ ಬೆಲೆ ಕೊಡುತ್ತಾರೆ. ನವರಸಗಳು ತುಂಬಿರುವ ಚಿತ್ರ ಎಂದರು.

ನಾಯಕಿ ವೈಷ್ಣವಿ ಮೆನನ್, ಶ್ರೀಮಂತ ಹುಡುಗಿಯಾಗಿ ಸಂಸ್ಕ್ರತಿಗೆ ಬೆಲೆಕೊಡುವ ಪಾತ್ರ ನನ್ನದು ಎಂದರೆ ಮತ್ತೊಬ್ಬ ನಾಯಕಿ ಮನಸ್ವಿನಿ ಪಾತ್ರದ ಪರಿಚಯ ಮಾಡಿಕೊಂಡರು. ಚಿತ್ರದಲ್ಲಿ ವಿಜಯ್‌ಚೆಂಡೂರ್, ನಿರಂಜನ್‌ದೇಶಪಾಂಡೆ, ಶಿಲ್ಪಗೌಡ ಇದ್ಧಾರೆ. ಮುಂದಿನವಾರ ಸುಮಾರು ೧೦೦ ಕೇಂದ್ರದಲ್ಲಿ  ಚಿತ್ರ ಬಿಡುಗಡೆಯಾಗಲಿದೆ.

Leave a Comment