ನವಕಾರ್ ಪುಸ್ತಕ ಮಳಿಗೆಯಲ್ಲಿ ನೋಟ್ ಪುಸ್ತಕಗಳ ಮಾರಾಟಕ್ಕೆ ಚಾಲನೆ

ಮೈಸೂರು, ಜ.11- ಉತ್ತಮ ಪ್ರಮಾಣ ಮತ್ತು ಗುಣಮಟ್ಟದ ನೋಟು ಪ್ರಸ್ತಕಗಳನ್ನು ತಯಾರಿಸುತ್ತಿರುವ ತಾಜ್ ವೈಟ್ ಸಂಸ್ಥೆಯು ಇಂದಿನಿಂದ ಮೈಸೂರಿನ ನವಕಾರ್ ಪುಸ್ತಕ ಮಳಿಗೆಯಲ್ಲಿ ನೋಟ್ ಪುಸ್ತಕಗಳ ಮಾರಾಟಕ್ಕೆ ಲಭ್ಯವಿವೆ ಎಂದು ತಾಜ್ ವೈಟ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ಯಾಂಸುಂದರ್ ಶೆಟ್ಟಿ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ದೇಶದಲ್ಲಿ ಬಹುಮುಖ ಮತ್ತು ಕೈಗೆಟಕುವ ದರದಲ್ಲಿ ನೋಟು ಪುಸ್ತಕಗಳನ್ನು ತಮ್ಮ ಸಂಸ್ಥೆಯು ಉತ್ಪಾದಿಸುತ್ತಿದ್ದು, ಅದನ್ನು ದಕ್ಷಿಣ ಭಾರತದಲ್ಲಿ ಪ್ರಚುರ ಪಡಿಸುವ ಸಲುವಾಗಿ ಇಂದು ಮೈಸೂರಿನಲ್ಲಿ ಚಾಲನೆ ನೀಡಲಾಗಿದೆ. ಪ್ರತಿಷ್ಟಿತ ಉಪಕಾರ್ ಪ್ರಕಾಶನ ಪ್ರೈ.ಲಿ ಈಗ ಸ್ಟೇಷನರಿ ವಿಭಾಗ ಮತ್ತು ತಾಜ್ ವೈಟ್ ನೋಟ್ ಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಈ ನೋಟ್ ಪುಸ್ತಕಗಳ ಬೆಲೆ ಬೇರೆ ನೋಟ್ ಪುಸ್ತಕಗಳಿಗೆ ಹೋಲಿಸಿದರೆ ತೀರ ಕಡಿಮೆ ಇದ್ದು, ಹೆಚ್ಚು ದಿನ ಉಪಯೋಗಿಸಿದರೂ ಹೊಸದರಂತೆಯೇ ಇರುತ್ತದೆ. ನೋಟ್ ಪುಸ್ತಕದ ಮೇಲೆ ದೇಶದ ಮಹಾನ್ ನಾಯಕರುಗಳಾದ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ ಹಾಗೂ ಇನ್ನಿತರರ ನೀತಿ ಸಂದೇಶಗಳನ್ನು ಮುದ್ರಿಸಲಾಗಿದೆ.
ಈ ನೋಟ್ ಪುಸ್ತಕವು ಉತ್ತಮ ಗುಣಮಟ್ಟ ಕಾಗದವನ್ನು ಹೊಂದಿದ್ದು, ಡ್ರಾಯಿಂಗ್ ಪುಸ್ತಕ, ಸ್ಪೈರಲ್ ನೋಟ್ ಬುಕ್ಸ್, ವೈರ್-ಓ ನೋಟ್ ಬುಕ್ಸ್, ರೈಟಿಂಗ್ ಪ್ಯಾಡ್ಸ್ ಹಾಗೂ ಇನ್ನಿತರೆ ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತವೆ ಎಂದು ಹೇಳಿದ ಅವರು, ಮೈಸೂರಿನ ಎಲ್ಲಾ ಭಾಗದಲ್ಲೂ ಈ ಪುಸ್ತಕಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುವ ವಿಶ್ವಾಸವಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಲಾಯಲ್ ವರ್ಡ್ಲ್ ಸೂಪರ್ ಮಾರ್ಕೆಟ್, ಈಸ್ಟರ್ನ್ ಮಾರ್ಕೆಟ್, ಶಾಪ್ ರೈಟ್ಸ್ ಸೂಪರ್ ಮಾರ್ಕೆಟ್ ಇನ್ನಿತರೆ ಸ್ಥಳಗಳಲ್ಲಿ ಈ ಪುಸ್ತಕಗಳು ದೊರೆಯುತ್ತವೆ. ಹೆಚ್ಚಿನ ವಿವರಗಳಿಗೆ ದೂ.ಸಂ. 0821-4269448 ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಸಾಗರ್ ಬಂತಿಯಾ, ಶಿವಪ್ರಸಾದ್ ಉಪಸ್ಥಿತರಿದ್ದರು.

Leave a Comment