ನರ ಸಂಬಂಧಿತ ಸಮಸ್ಯೆ ನಿವಾರಣೆಗೆ ಹೋಮಿಯೋಪತಿ ಚಿಕಿತ್ಸೆ

ಸಯಾಟಿಕಾ ಇದೊಂದು ರೀತಿಯಲ್ಲಿ ಅಸಹನೀಯ ವಾದ ರೀತಿಯಲ್ಲಿ ನೋವನ್ನು ಉಂಟುಮಾಡುವ ಮತ್ತು ಕಾಡುವ ಆಗೋಗ್ಯ ಸಮಸ್ಯೆ. ಈಗಿನ ಆಧುನಿಕ ಯುಗದಲ್ಲಿ ಸಯಾಟಿಕಾ ಸಮಸ್ಯೆ ಬಗ್ಗೆ ಬಹುತೇಕ ಯುವ ಮತ್ತು ಮಧ್ಯಮ ವಯಸ್ಸಿನವರಿಗೆ ಅರಿವಿದೆ. ಸಯಾಟಿಕಾ ಸಮಸ್ಯೆಗೆ ಸಿಲುಕುವವರು ವರ್ಣಿಸಲು ಸಾಧ್ಯವಿಲ್ಲದಂತಹ ನೋವಿನಿಂದ ಬಳಲುತ್ತಾರೆ. ಇಂತಹ ಜನರ ದೈನಂದಿನ ಬದುಕು ಆತಂಕದಲ್ಲೇ ಇರುತ್ತದೆ.

health-dr-padmavathi-copy

ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್‌ನ ಪ್ರಕಾರ ಶೇ. ೬೨ ರಷ್ಟು ಜನ ನೋವಿನ ಕಾರಣಕ್ಕಾಗಿಯೇ ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುತ್ತಾರೆ. ಸೂಕ್ತ ಸಮಯದಲ್ಲಿ ಸಮಸ್ಯೆ ಪತ್ತೆ ಮಾಡುವ ಜತೆಗೆ ಉತ್ತಮ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಅತ್ಯುತ್ತಮ ಚಿಕಿತ್ಸೆಯೊಂದಿಗೆ ದೈನಂದಿನ ಜೀವನ ಕ್ರಮದಲ್ಲಿ ಬದಲಾವಣೆ, ಯೋಗ, ಫಿಸಿಯೋ ಥೆರಪಿ, ಹೋಮಿಯೋಪತಿ ಔಷಧಿಗಳ ಮೂಲಕ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರ ಬರಬಹುದು. ಸಯಾಟಿಕಾ ಸಮಸ್ಯೆಗೆ ಒಳಗಾಗುವವರು ಶಸ್ತ್ರಚಿಕಿತ್ಸೆ ಮೊರೆ ಹೋಗುವ ಪರಿಸ್ಥಿತಿ ಎದುರಾಗುವುದಲ್ಲದೇ ಮತ್ತೊಬ್ಬರ ಮೇಲೆ ಅವಲಂಬನೆಯಾಗಬೇಕಾಗುತ್ತದೆ ಎನ್ನುವ ಆತಂಕದಲ್ಲೂ ಇರುತ್ತಾರೆ. ಆದರೆ ಹೋಮಿಯೋಪತಿ ಈ ಎಲ್ಲಾ ಕಳವಳಗಳನ್ನು ದೂರ ಮಾಡುತ್ತದೆ.

ಶರೀರದಲ್ಲಿ ಎಲ್ಲದಕ್ಕಿಂತ ಸಯಾಟಿಕ ನರ ದೊಡ್ಡದು. ಕೆಳಗಿನ ಬೆನ್ನು ಭಾಗದಿಂದ ಹಿಡಿದು, ಪಕ್ಕೆಲೆಬುನಿಂದ ಕಾಲಿನ ಹಿಂದಿನವರೆಗೂ ಸಾಗುವ ಮುಖ್ಯವಾದ ನರ ಇದಾಗಿದೆ. ಈ ನರ ಇತರೆ ಐದು ನರಗಳ ಸಮೂಹದಿಂದ ಏರ್ಪಡುತ್ತದೆ. ಬೆನ್ನುಹುರಿ ಒಳಗಿನಿಂದ ಸಯಾಟಿಕಾ ನರ ಸಾಗುತ್ತದೆ. ನರಗಳ ಒತ್ತಡದಿಂದ ಕಾಲಿನ ಹಿಂದಿನ ಭಾಗದವರೆಗೂ ನೋವು ಇರುತ್ತದೆ. ಇದಕ್ಕೆ ಸಯಾಟಿಕಾ ನೋವು ಎನ್ನುತ್ತಾರೆ. ಈ ನೋವು ಬೆನ್ನಿನ ಹಿಂದಿನ ಭಾಗದಿಂದ ಮೊದಲಾಗಿ ಪಕ್ಕೆಲುಬು, ತೊಡೆ, ಕಾಲಿನ ಹಿಂಭಾಗದಿಂದ ಹಿಮ್ಮಡಿಗಳ ವರೆಗೆ ಹರಿಯುತ್ತದೆ. ಜುಮ್ಮು ಹಿಡಿಯುವುದು, ಸ್ಪರ್ಷ ಕಡಿಮೆಯಾಗುವುದು, ಬೆಂಕಿಯಂತೆ ಸುಡುವ ಯಾತನೆ, ನಡತೆಯಲ್ಲೂ ಸಹ ಬದಲಾವಣೆಗಳನ್ನು ಕಾಣಬಹುದಾಗಿದೆ.

ಇದಕ್ಕೆ ಕಾರಣಗಳನ್ನು ಪತ್ತೆ ಮಾಡುವುದಾದರೆ ನರ್ವ್ ಕಂಪ್ರೆಷನ್ ಆಗುವುದರಿಂದ ನೋವು ಬರುತ್ತದೆ. ಸ್ಪೈನಲ್ ಡಿಸ್ಕ್ ಹೆರ್ ನಿಯೋಷನ್ ಅಂದರೆ ನರಗಳ ಮಾರ್ಗದಲ್ಲಿ ಒತ್ತಡಕ್ಕೆ ಗುರಿಯಾಗಿ ಸರಿಯಾದ ಸ್ಥಿತಿಯಲ್ಲಿ ಪಕ್ಕಕ್ಕೆ ತಿರುಗಲೂ ಆಗದಂತಹ ಅಸಹನೀಯ ನೋವು ಕಂಡು ಬರುತ್ತದೆ. ಇನ್ನು ಫೆರಿಫಾರಮಿಸ್ ಸಿಂಡ್ರೋಮ್, ಅಂದರೆ ಪೆಟ್ಟುಗಳು, ಗಾಯಗಳು ಬೀಳುವಾಗ ಫರಿಫಾರಮಿಸ್ ಮಾಂಸಖಂಡಗಳಿಂದ ಹಾದುಹೋಗುವ ನಗರಗಳ ಮಾರ್ಗದಲ್ಲಿ ಒತ್ತಡ ಬೀಳುವುದರಿಂದಲೂ ಸಯಾಟಿಕ ನೋವು ಕಂಡು ಬರುತ್ತದೆ.

ಜತೆಗೆ ಸಾಕ್ರಾ ಇಲಿಯಕ್ ಜಾಯಿಂಟ್ ಡಿಸ್ಕ್, ಅಂದರೆ ಶಾರೀರಿಕ ಶ್ರಮ, ವ್ಯಾಯಾಮ ಇಲ್ಲದೇ ನರಗಳು ಸರಿಯಾಗಿ ಕೆಲಸ ಮಾಡದೇ ಇರುವುದು, ಗರ್ಭೀಣಿಯರಲ್ಲಿ ಅದರಲ್ಲೂ ಕೊನೆಯ ತಿಂಗಳಲ್ಲಿ ಶಿಶು ದೊಡ್ಡದಾಗಿ ಬೆಳೆದು ನರಗಳ ಮಾರ್ಗದಲ್ಲಿ ಒತ್ತಡ ಉಂಟಾಗುವುದರಿಂದಲೂ ಈ ಸಮಸ್ಯೆ ಕಂಡು ಬರಬಹುದು.

health-ho2

ಈ ಸಮಸ್ಯೆಗೆ ಪರೀಕ್ಷೆಗಳು ಅತಿ ಮುಖ್ಯವಾಗುತ್ತವೆ. ವೈದ್ಯರ ಸಮಕ್ಷಮದಲ್ಲಿ ಕೆಲವು ವ್ಯಾಯಾಮಗಳೊಂದಿಗೆ ಕೆಲವು ಪರೀಕ್ಷೆಗಳನ್ನು ಮಾಡಿದಾಗ ಸಯಾಟಿಕಾ ನೋವಿನ ಪ್ರಮಾಣ ನಿರ್ಧಾರವಾಗುತ್ತದೆ. ಎಂ.ಆರ್.ಐ ಸ್ಕ್ಯಾನ್, ಹರ್ನಿಯೋಷನ್, ಡಿಸ್ಕ್ ಪ್ರಾಲಾಪ್ಸ್ ಹೀಗೆ ಹಲವು ವಿಧದ ಪರೀಕ್ಷೆಗಳಿವೆ.

ಸಮಸ್ಯೆ  ಬಂತೆಂದು ಯಾವುದೋ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದರೆ ತಕ್ಷಣಕ್ಕೆ ಉಪಶಮನ ಕಾಣಬಹುದು. ಆದರೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಮಾತ್ರೆಗಳನ್ನು ದಿನನಿತ್ಯ ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಜತೆಗೆ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಅಸಿಡಿಟಿ, ಅಲ್ಸರ್, ಫರ್‌ಫಾರೋಷನ್ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಈ ಸಮಸ್ಯೆಗೆ ಹೋಮಿಯೋಪತಿಯಲ್ಲಿ ಹಲವು ವಿಧದ ಔಷಧಗಳಿವೆ. ರಸಟಾಕ್ಸ, ಕಿಲೋಸಿಂಥ್, ರೊಡೆಡೆಸ್ ಡ್ರೆನ್, ಕಾಸ್ಟಿಕಮ್ ಹೀಗೆ ಒಂದೊಂದು ಔಷಧ ಒಂದೊಂದು ರೀತಿಯಲ್ಲಿ ಪರಿಣಾಮಕಾರಿ. ಆದರೆ ತಜ್ಞ ವೈದ್ಯರಿಂದ

ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳುದು ಉತ್ತಮ ಮಾರ್ಗ. ಸಮಸ್ಯೆಯ ಆಳ, ತೀವ್ರತೆಯನ್ನು ಮನಗಂಡು ಸ್ಟಾರ್ ಹೋಮಿಯೋಪತಿಯ ವೈದ್ಯರು ಅಗತ್ಯ ಸಂದರ್ಭದಲ್ಲಿ ಸೂಕ್ತ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಸಿದ್ಧಹಸ್ತರು.

  • ಡಾ.ಪದ್ಮವತಿ ತಜ್ಞ ವೈದ್ಯರು,
  • ಸ್ಟಾರ್ ಹೋಮಿಯೋಪತಿ
  • 7569333480

Leave a Comment