ನರರೂಪಿ ರಕ್ಕಸರು : ಪಾದರಾಯನಪುರ ಘಟನೆಗೆ ನಟ ಜಗ್ಗೇಶ್ ಖಂಡನೆ

ಬೆಂಗಳೂರು, ಏ 20- ನಗರದ ಪಾದರಾಯನಪುರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಕಾರ್ಯಕ್ಕೆ ತೆರಳಿದ್ದವರ ಮೇಲೆ ನಡೆದ ಹಲ್ಲೆಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದೆ.

ಇದೇ ವೇಳೆ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಕೂಡ ಟ್ವಿಟರ್ ನಲ್ಲಿ ಘಟನೆಯ ಬಗ್ಗೆ ಕಿಡಿ ಕಾರಿದ್ದು, ಹಲ್ಲೆ ನಡೆಸಿದ ಜನ ನರರೂಪದ ರಾಕ್ಷಸರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೋವಿಡ್ 19 ತಡೆಗಟ್ಟಿ, ಜನತೆಯ ಜೀವ ಉಳಿಸಲು ಹೋದ ಪೊಲೀಸರು, ಅಧಿಕಾರಿಗಳು ಮತ್ತು ಸ್ವಯಸೇವಕರ ಮೇಲೆ ದಾಳಿ ಮಾಡಿ ಮೃಗಗಳ ರೀತಿ ವರ್ತಿಸಿರುವ ನರರೂಪದ ರಾಕ್ಷಸರ ಮೇಲೆ ಕಾನೂನುಕ್ರಮ ಜರುಗಿಸಬೇಕು. ಇಂತಹ ದುಂಡಾವರ್ತನೆ ಮರುಕಳಿಸದಂತೆ ಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.

Leave a Comment