ನಮ್ಮೂರ ಸಂತೆ ಕೆನರಾ ಬ್ಯಾಂಕ್‌ನ ಅದ್ಭುತ ಪರಿಕಲ್ಪನೆ

ಕೆನರಾ ಬ್ಯಾಂಕ್ ಸಂಸ್ಥಾಪನೆಯಾಗಿನಿಂದ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸಬಲತೆ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಸಾಮಾಜಿಕ ಕಳಕಳಿಯಿರುವ ಕೆನರಾ ಬ್ಯಾಂಕ್ ತನ್ನದೇ ಆದ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ದತ್ತಿ ಮುಖಾಂತರ ಲಕ್ಷಾಂತರ ಮಹಿಳೆಯರಿಗೆ ಹಾಗೂ ಸ್ವ-ಸಹಾಯ ಸಂಸ್ಥೆಗಳ ಸದಸ್ಯರಿಗೆ  ತರಬೇತಿ ನೀಡುವುದಲ್ಲದೆ, ಸಾಲದ ಸೌಲಭ್ಯವನ್ನೂ ನೀಡಿ, ಅವರು ಸ್ವಾವಲಂಬಿಗಳಾಗಲು ಅನುವು ಮಾಡಿಕೊಟ್ಟಿದೆ.

  • ಪದಾರ್ಥಗಳ ಗುಣಮಟ್ಟಕ್ಕೆ ಆಕರ್ಷಿತರಾಗಿ, ಗ್ರಾಹಕರು ಮದುವೆ ಅಥವಾ ಇತರೆ ಶುಭಸಮಾರಂಭಗಳಿಗೆ ಹೆಚ್ಚಿನ ಪದಾರ್ಥಗಳಿಗೆ ಆರ್ಡರ್ಸ್ ನೀಡಿರುವ ನಿದರ್ಶನಗಳೂ ಇವೆ.  ಮಾರಾಟದಿಂದ ಬಂದ ಹಣವನ್ನು, ಯಾವುದೇ ಕಡಿತಗಳಿಲ್ಲದೆ, ಕೆನರಾ ಬ್ಯಾಂಕ್ ಮಹಿಳಾ ಉದ್ಯಮಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ.

  • ಸಿಬ್ಬಂದಿ ವೇತನ ಹಾಗೂ ವಾಹನ ಮತ್ತು ಕಚೇರಿಯ ನಿರ್ವಹಣಾ  ವೆಚ್ಚವನ್ನು , ಕೆನರಾ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ದತ್ತಿಯೇ ಭರಿಸುತ್ತಿರುವುದು ಮತ್ತೊಂದು ವಿಶೇಷ.  

ಇದರ ಜೊತೆಗೆ ಮಹಿಳೆಯರು ತಯಾರಿಸಿದ ಉತ್ಪನ್ನಗಳಾದ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಮತ್ತು ವೈವಿಧ್ಯಮಯ ಉಡುಪುಗಳ ಇತ್ಯಾದಿಗಳಿಗೆ ತಕ್ಕ ಮಾರುಕಟ್ಟೆ ಇಲ್ಲವೆಂಬ ಕೊರಗನ್ನು ನೀಗಿಸಲು, ಕೆನರಾ ಬ್ಯಾಂಕ್ ‘ನಮ್ಮೂರ ಸಂತೆ’ ಎಂಬ ಹೆಸರಿನ ಸಂಚಾರಿ ಮಾರಾಟ ವಾಹನವನ್ನು ಲೋಕಾರ್ಪಣೆ ಮಾಡಿರುವುದು ನಿಜಕ್ಕೂ ಕೆನರಾ ಬ್ಯಾಂಕಿನ ಅತ್ಯದ್ಭುತ ಪರಿಕಲ್ಪನೆ.

ಬೆಂಗಳೂರು ನಗರದಲ್ಲೂ ‘ನಮ್ಮೂರ ಸಂತೆ’ ಸಂಚಾರಿ ಮಾರಾಟ ವಾಹನದ ಸೌಲಭ್ಯವಿದ್ದು, ಸುಮಾರು ಒಂದು ದಶಕಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ ಕೋರಮಂಗಲ, ಮಡಿವಾಳ, ಮಲ್ಲೇಶ್ವರಂ, ಜಿಕೆವಿಕೆ, ಯಲಹಂಕ ನ್ಯೂ ಟೌನ್  ಇತ್ಯಾದಿ ಪ್ರಮುಖ ಪ್ರದೇಶಗಳಲ್ಲಿ ಸಂಚಾರಿ ಮಾರಾಟ ವಾಹನದ ಮೂಲಕ ಉತ್ಪನ್ನ ಮತ್ತು ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಮಹಿಳಾ ಉದ್ಯಮಿಗಳು ಸಿದ್ಧ ಪಡಿಸಿದ ಉತ್ಪನ್ನ ಮತ್ತು ಪದಾರ್ಥಗಳು ಗ್ರಾಹಕರ ಮನೆ ಬಾಗಿಲಿಗೇ ತಲುಪಿದಂತಾಗುತ್ತದೆ. ನಮ್ಮೂರ ಸಂತೆಯಲ್ಲಿ ಮಾರಾಟವಾಗುವ ಪದಾರ್ಥಗಳ ಗುಣಮಟ್ಟ ಅತ್ಯುತ್ತಮವಾಗಿದ್ದು, ಗ್ರಾಹಕರಿಂದ  ಭಾರಿ ಬೇಡಿಕೆಯಿದೆ.

ಪದಾರ್ಥಗಳ ಗುಣಮಟ್ಟಕ್ಕೆ ಆಕರ್ಷಿತರಾಗಿ, ಗ್ರಾಹಕರು ಮದುವೆ ಅಥವಾ ಇತರೆ ಶುಭಸಮಾರಂಭಗಳಿಗೆ ಹೆಚ್ಚಿನ ಪದಾರ್ಥಗಳಿಗೆ ಆರ್ಡರ್ಸ್ ನೀಡಿರುವ ನಿದರ್ಶನಗಳೂ ಇವೆ.  ಮಾರಾಟದಿಂದ ಬಂದ ಹಣವನ್ನು, ಯಾವುದೇ ಕಡಿತಗಳಿಲ್ಲದೆ, ಕೆನರಾ ಬ್ಯಾಂಕ್ ಮಹಿಳಾ ಉದ್ಯಮಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ.  ಸಿಬ್ಬಂದಿ ವೇತನ ಹಾಗೂ ವಾಹನ ಮತ್ತು ಕಚೇರಿಯ ನಿರ್ವಹಣಾ  ವೆಚ್ಚವನ್ನು , ಕೆನರಾ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ದತ್ತಿಯೇ ಭರಿಸುತ್ತಿರುವುದು ಮತ್ತೊಂದು ವಿಶೇಷ.

ಈ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ, ಮಹಿಳಾ ಉದ್ಯಮಿಗಳಿಗೆ ಈ ಮಾರಾಟದಿಂದ ಹೆಚ್ಚಿನ ಆದಾಯ ತರುವುದಲ್ಲದೆ, ಗ್ರಾಹಕರಿಗೂ ಉತ್ತಮ ಮಟ್ಟದ, ನ್ಯಾಯಯುತ ಬೆಲೆಯಲ್ಲಿ ತಾಜಾ ಪದಾರ್ಥಗಳು ದೊರಕಿದಂತಾಗುತ್ತದೆ. ಈ ಯೋಜನೆಯ ಲಾಭವನ್ನು ಬೆಂಗಳೂರಿನ ನೂರಾರು ಮಹಿಳಾ ಉದ್ಯಮಿಗಳು ಪಡೆಯುತ್ತಿದ್ದಾರೆ.

ಉತ್ತರ ಕರ್ನಾಟಕ ಫುಡ್ ಸಂಸ್ಥೆಯ ಮಾಲೀಕರಾದ ಶ್ರೀಮತಿ ಎಲ್ ಪಿ ಲತಾ ರವರ ಪ್ರಕಾರ ‘ ಕೆನರಾ ಬ್ಯಾಂಕ್‌ನ ನಮ್ಮೂರ ಸಂತೆ ಯೋಜನೆಯಿಂದಾಗಿ ನಾವು ಸಿದ್ಧಪಡಿಸುವ ಆಹಾರ ಪದಾರ್ಥಗಳಿಗೆ ಕರ್ನಾಟಕದಲ್ಲದೆ ವಿದೇಶದಲ್ಲೂ  ಹೆಚ್ಚಿನ ಬೇಡಿಕೆಯಿದೆ. ಸದ್ಯದಲ್ಲಿ ನಮಗೆ ಕೈತುಂಬ ಆರ್ಡರ್ಸ್ ಗಳಿವೆ.  ನಮ್ಮೂರ ಸಂತೆ ಮಾರಾಟ ವಾಹಿನಿ ಸಿಬ್ಬಂದಿವರ್ಗದವರು ನಮ್ಮ ಪದಾರ್ಥಗಳನ್ನು ಮಾರಾಟವಾಗಲು ಸಹಕರಿಸುವುದರ ಜೊತೆಗೆ, ಹೊಸ ಹೊಸ  ಗ್ರಾಹಕರನ್ನು ನಮಗೆ ಪರಿಚಯಿಸುತ್ತಾರೆ. ಇದರಿಂದ ನಮ್ಮ ವ್ಯಾಪಾರ-ವಹಿವಾಟುಗಳಲ್ಲಿ  ಹೆಚ್ಚಳ ಕಂಡಿದೆ’.

ಮಹಿಳಾ ಉದ್ಯಮಿಗಳು ಸಿದ್ಧಪಡಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವುದರಲ್ಲಿ ಕೆನರಾ ಬ್ಯಾಂಕ್ ನ ಯೋಜನೆಯು ಅತ್ಯಂತ ಶ್ಲಾಘನೀಯ. ಬೆಂಗಳೂರಿನ  ಮಹಿಳಾ ಉದ್ಯಮಿಗಳು ಈ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಬಹುದು.

Leave a Comment