ನಮ್ಮಿಂದಲೇ ಮೊದಲು ಸ್ವಚ್ಚತೆ ಆರಂಭವಾಗಲಿ-ಶೆಟ್ಟಿ

ಹುಬ್ಬಳ್ಳಿ:19:  ಸ್ಚಚ್ಚತೆಎಂಬುದು ಸಮಾಜದಲ್ಲಿ‌ ಮೊದಲು ನಮ್ಮಿಂದಲೇ ಆರಂಭವಾಗಬೇಕು ಎಂದು ಹುಬ್ಬಳ್ಳಿಯ ಕೈಗಾರಿಕೋದ್ಯಮಿಗಳಾದ  ಸಂತೋಷ ಆರ್. ಶೆಟ್ಟಿ ಹೇಳಿದರು.
ನಗರದ ಜೈನ್ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಪ್ರಾಂತೀಯ ಎನ್.ಎಸ್.ಎಸ್ ಕೇಂದ್ರ ಬೆಂಗಳೂರು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಹುಬ್ಬಳ್ಳಿಯ ಜೈನ್ ಪದವಿ ಕಾಲೇಜುಗಳ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಏಳು ದಿನಗಳ ಸ್ವಚ್ಚತಾ ಶಿಬಿರದ ನಾಲ್ಕನೇ‌ ದಿನದ ಮೂರನೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜದಲ್ಲಿ ಸ್ವಚ್ಚ ಪರಿಸರ ಮತ್ತು ಪರಿಸರ‌ದ ಕುರಿತಾದ ಜಾಗೃತಿ ಮೂಡಿಸುವಲ್ಲಿ ಎನ್.ಎಸ್.ಎಸ್ ನ ಪಾತ್ರ ಅತಿಮುಖ್ಯವಾಗಿದೆ.ಜನರಲ್ಲಿ ಸ್ವಚ್ಚತೆ ಪ್ಲಾಸ್ಟಿಕ್ ಮುಕ್ತ ಭಾರತದ ಕನಸಿನ ಕುರಿತು  ಜಾಗೃತಿ ಮೂಡಿಸುವುದು ಉತ್ತಮ ಕಾರ್ಯ ವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಂಯೋಜನಾ ಅಧಿಕಾರಿಗಳಾದ ಡಾ.ಎಂ.ಬಿ.ದಳಪತಿ ಜೈನ್ ಪದವಿ ಕಾಲೇಜಿನ ಪ್ರಾಚಾರ್ಯೆ ಪ್ರೋ.ಮಾಯಾ ಕುಲಹಳ್ಳಿ  ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಎನ್ ಎಮ್ ಸಂಗಮ್ಮನವರ, ಡಾ.ಎಮ್ ಡಿ ಹೋರಕೇರಿ, ಕಿಲ್ಲೆದಾರ,ಪ್ರೊ.ಎಸ್.ವಿ.ಹಿರೇಮಠ. ಉಪಸ್ಥಿತರಿದ್ದರು.

Leave a Comment