ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ – ಹೆಚ್.ಡಿ.ಕುಮಾರಸ್ವಾಮಿ

ಮೈಸೂರು:ಫೆ.17- ನಂಜನಗೂಡು ಕ್ಷೇತ್ರ ಉಪಚುನಾವಣೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಜೆಡಿಎಸ್‌ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು
ಅವರು ಇಂದು ನಂಜನಗೂಡಿಗೆ ತೆರಳುವ ಮುನ್ನ ಸುದ್ದಿಗಾರರೂಂದಿಗೆ ಮಾತನಡುತ ನಂಜನಗೂಡು ಉಪಚುನಾವಣೆ ಜೆಡಿಎಸ್‌ ಪಕ್ಷಕ್ಕೆ ಸಂದ್ಗಿದ್ದ ಪರಿಸ್ಥಿತಿ ಉಂಟು ಮಾಡಿದೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಇಲ್ಲದೆ ಒಬ್ಬರು ಶ್ರೀನಿವಾಸ್ ಪ್ರಸಾದ್ ಗೆ ಮಣೆ ಹಾಕಿದರೆ ಮತ್ತೊಬ್ಬರು ಕೇಶವಮೂರ್ತಿಗೆ ಮಣೆ ಹಾಕಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಹೇಳಿದರು
ಕಳಲೆ ಕೇಶವಮೂರ್ತಿ ಒಬ್ಬ ಅಪಾಯಕಾರಿ ವ್ಯಕ್ತಿ. ಅವರು ಜೆಡಿಎಸ್‌ ಪಕ್ಷ ಬಿಡಲು ನಮ್ಮ ಅನುಮತಿ ಕೇಳಿಲ್ಲ. ಮಾಧ್ಯಮಗಳ ಮುಂದೆ ನನ್ನ, ದೇವೆಗೌಡರ ಹೆಸರು ಬಳಸಿದ್ದು ನೋವಾಗಿದೆ‌. ಕೇಶವಮೂರ್ತಿಯವರನ್ನ ಬಹಳಾ ಸಜ್ಜನ ಎಂದುಕೊಂಡಿದ್ದೆ. ಯಕಶ್ಚಿತ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಈ ರೀತಿ ಸುಳ್ಳುಹೇಳುತ್ತಾರೆ ಎಂದುಕೊಂಡಿರಲಿಲ್ಲ.ಕಾಂಗ್ರೆಸ್ ಜೊತೆ ಯಾವ ಒಪ್ಪಂದ ಮಾಡಿಕೊಂಡು ಜೆಡಿಎಸ್‌ ಬಿಟ್ಟಿದ್ದಾರೋ ಗೊತ್ತಿಲ್ಲ. ಆದ್ರೆ ಅವರ ನಡೆಯಿಂದ ಅವರೊಬ್ಬ ಅಪಾಯಕಾರಿ ವ್ಯಕ್ತಿ ಅನ್ನೋದು ಸಾಬೀತಾಗಿದೆ. ನಂಜನಗೂಡಿನಲ್ಲಿ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಟದ ರಾಜಕೀಯ ಮಾಡುತ್ತಿದ್ದಾರೆ. ಆ ಎರಡು ಪಕ್ಷಗಳಲ್ಲಿ ಹಣದಿಂದಲೇ ಉಪಚುನಾವಣೆ ನಡೆಯುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಸಾಲಸೋಲ ಮಾಡಿಕೊಂಡು ಚುನಾವಣೆ ಎದುರಿಸಬೇಕಿದೆ. ನಂಜನಗೂಡು ಉಪಚುನಾವಣೆ ಜೆಡಿಎಸ್‌ ಪಕ್ಷಕ್ಕೆ ಸಂದ್ಗಿದ್ದ ಪರಿಸ್ಥಿತಿ ಉಂಟು ಮಾಡಿದೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಇಲ್ಲದೆ ಒಬ್ಬರು ಶ್ರೀನಿವಾಸ್ ಪ್ರಸಾದ್ ಗೆ ಮಣೆ ಹಾಕಿದರೆ ಮತ್ತೊಬ್ಬರು ಕೇಶವಮೂರ್ತಿಗೆ ಮಣೆ ಹಾಕಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ ಎಂದು ಜೆಡಿಎಸ್‌ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು

Leave a Comment