‘ನನ್ನ ಹತ್ಯೆಗೂ ಸಂಚು ನಡೆದಿದೆ’

ಮಂಗಳೂರು, ಜ.೧೮- ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಸಂಚು ರೂಪಿಸಿದೆ ಎಂಬ ಸುದ್ದಿ ಬಹಿರಂಗವಾದ ಬೆನ್ನಲ್ಲೇ ‘ನನ್ನ ಹತ್ಯೆಗೂ ಸ್ಕೆಚ್ ಹಾಕಲಾಗಿದೆ’ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ಸಮಾಜದ್ರೋಹಿ ಶಕ್ತಿಗಳಿಗೆ ಯಾರಿಂದಲೂ ಬೆಂಬಲ ವ್ಯಕ್ತವಾಗುವುದಿಲ್ಲ, ಕಾನೂನು ಎಲ್ಲರಿಗೂ ಒಂದೇ. ನನ್ನ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದ್ದು ಹೀಗಾಗಿ ನಾನು ಬೇಡ ಎಂದರೂ ನನಗೆ ಪೊಲೀಸ್ ರಕ್ಷಣೆ ನೀಡಲಾಗುತ್ತಿದೆ.

ಈ ದಾಳಿ ಯಾಕಾಗಿ ನಡೆಯುತ್ತದೆ ಅನ್ನುವ ಬಗ್ಗೆ ಸ್ಪಷ್ಟತೆ ನೀಡಲಿ. ಯಾಕೆಂದರೆ ಒಬ್ಬರನ್ನೊಬ್ಬರು ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದಕ್ಕೂ ಸಾಕ್ಷ್ಯಧಾರಗಳ ಅಗತ್ಯವಿದೆ. ಹೀಗಾಗಿ ಸಾಕ್ಷ್ಯಧಾರಗಳೊಂದಿಗೆ ಜನರಿಗೆ ನಂಬಿಕೆ ಹುಟ್ಟಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿ ಎಂದು ಹೇಳಿದ್ದಾರೆ. ಈಗ ಬಿಜೆಪಿಯೂ ಪ್ರತಿಪಕ್ಷದಲ್ಲಿಲ್ಲ ಅವರದ್ದೇ ಸರ್ಕಾರ ಇದೆ. ಹೀಗಾಗಿ ಬರೇ ಆರೋಪಗಳನ್ನು ಮಾಡುವುದನ್ನು ಬಿಟ್ಟು ಆರೋಪಿಗಳನ್ನು ಬಂಧಿಸಲಿ ಎಂದು ಹೇಳಿದ್ದಾರೆ.

Leave a Comment