ನನ್ನ ರಾಜಕೀಯಜೀವನ ಸುಗಮವಿರಲಿಲ್ಲ : ಶಿವಳ್ಳಿ

ಕುಂದಗೋಳ ಜ12:   ನಾನು ನಡೆದು ಬಂದ ದಾರಿ ಸುಗಮವಾಗಿರದೆ, ಕಲ್ಲು-ಮುಳ್ಳಿನ ದಾರಿಯನ್ನದೆ ಗುರಿಮುಟ್ಟಲು ಕಳೆದ 25 ವರ್ಷಗಳ ಹಿಂದೆ ಕುಂದಗೋಳ ಕಾಶಮ್ಮರ ಮನೆಯಲ್ಲಿ ಚುರುಮರಿ ತಿಂದು, ಜಾತಿ-ಮತ ಎಣಿಸದ ವ್ಯಕ್ತಿಗಳಿಂದ ರಾಜಕೀಯ ನುಡಿಮಾತುಳನ್ನಾಲಿಸಿ, ಅವರನ್ನೇ ನನ್ನ ಗುರುವಾಗಿಸಿಕೊಂಡು ಮುಂದಿನ ಗುರಿ ಮುಟ್ಟಿದೆ ಎಂದು ರಾಜ್ಯ ನೂತನ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತಾವು ನಡೆದುಬಂದ ದಿನಮಾನಗಳನ್ನು ನೆನೆದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅದ್ದೂರಿ ಸ್ವಾಗತ-ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಸುಮಾರು 11 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬಂದ ನನ್ನ ಮುಳ್ಳಿನ ಹಾದಿಯಲ್ಲಿ ನಡೆದು ಬಂದನಾನು ನನ್ನ ತಂದೆ ಆಶೀರ್ವಾದದಂತೆ ಮೊದಲು ಪಕ್ಷೇತರನಾಗಿ ಸಾವಿರಾರು ಜನರ ಉಪಕಾರದೊಂದಿಗೆ ಗೆದ್ದು ಶಾಸಕನಾಗಿ ಇಂದು ಸಚಿವನಾಗಿರುವದು ನನಗೆ ಸಾಮಾನ್ಯವೆನಿಸುತ್ತಿಲ್ಲ. ಹಿಂದೂ ಧರ್ಮ ದೇವ ಹನುಮಂತನನ್ನು ಬಗಲಲ್ಲಿಟ್ಟುಕೊಂಡು ಸ್ವಾಮೀಜಿಯೋರ್ವರು ನನ್ನನ್ನು ಸೋಲಿಸಲಾಗದೆ ಅದೇ ಹನುಮಂತ ನನಗೆ ಆಶೀರ್ವಧಿಸಿ ಇಂದು ಸಚಿವನನ್ನಾಗಿಸಿದ್ದಾನೆ. ಅದೇ ಆಶೀರ್ವಾದದಿಂದ ಮುನ್ನಡೆದು ಕುಂದಗೋಳ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ ಶಿವಳ್ಳಿ ಅಭಿಮಾನದ ವ್ಯಕ್ತಿ, ಬಂಗಾರಪ್ಪನವರ ಕುಡಿ, ಮುಲ್ಕಿ ಪಾಟೀಲರ ಕೂಸು, ಪರಿಶ್ರಮ ಜೀವಿ, ಕಿಮ್ಸ್‍ನಲ್ಲಿ ರೋಗಿಗಳ ಸೇವಾನಿರತನಾಗಿ ಬೆಳೆದ ಶ್ರದ್ಧಾಪೂರಕ ಜೀವಿ ಎಂದು ವಿವರಿಸಿದರು. ಮಾಜಿ ಮಹಾಪೌರ ಅನೀಲಕುಮಾರ ಪಾಟೀಲ ಮಾತನಾಡಿ ಝೀರೋದಿಂದ ಹೀರೋವಾದ ಶಿವಳ್ಳಿಯವರ ನಡೆ, ನುಡಿ, ಜನಸ್ನೇಹಿ ಕಾರ್ಯಗಳು ನಮ್ಮೆಲ್ಲರಿಗೆ ಮಾರ್ಗದರ್ಶನವಾಗಿದ್ದಾರೆ.
ಜಿ.ಪಂ ಸದಸ್ಯ ಉಮೇಶ ಹೆಬಸೂರ, ಪ.ಪಂ ಅಧ್ಯಕ್ಷೆ ಹಾಸಂಬಿ ಚಡ್ಡಿ, ಕಾಂಗ್ರೆಸ್ ಮುಖಂಡರಾದ ಅರವಿಂದ ಕಟಗಿ, ಡಾ: ಮಹೇಶ ನಾಲವಾಡ, ಅಲ್ತಾಫ ಹಳ್ಳೂರ, ಎ.ಬಿ.ಉಪ್ಪಿನ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕುರುಬರ, ಶಾಂತವ್ವ ಗುಜ್ಜಳ, ಸಿದ್ದಪ್ಪ ಹುಣಸಣ್ಣವರ, ಸಾವಕ್ಕ ಬಡಿಗೇರ, ಮಲ್ಲಿಕಾರ್ಜುನ ಕಿರೇಸೂರ, ಅಜೀಜ ಕ್ಯಾಲ್ಕೊಂಡ, ಮಾಬೂಲಿ ನದಾಫ, ಬಸುರಾಜ ದೊಡಮನಿ, ದ್ಯಾಮವ್ವ ಬೀಡನಾಳ, ಬಸಮ್ಮ ಅಲ್ಲಾಪೂರ, ರಾಯೇಸಾಬ ಕಳ್ಳಿಮನಿ, ಗಂಗಾಧರ ಪಾಣಿಗಟ್ಟಿ, ಇಮ್ತಿಯಾಜ ಮುಲ್ಲಾ, ದಯಾನಂದ ಕುಂದೂರ, ಸಕ್ರುಲಮಾಣಿ, ದ್ಯಾಮಣ್ಣ ಅಡರಕಟ್ಟಿ, ಪವಾಡೆಪ್ಪ ಪವಾಡೆಪ್ಪನವರ  ಸೇರಿದಂತೆ ಕಾಂಗ್ರೆಸ್ ಮುಖಂಡರು, ಶಿವಳ್ಳಿ ಅಭಿಮಾನಿಗಳು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ನೂತನ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ಪ್ರಥಮಬಾರಿಗೆ ಶುಕ್ರವಾರ ಕುಂದಗೋಳಕ್ಕೆ ಆಗಮಿಸಿ, ಮೊದಲು ಬೃಹ್ಮಲಿಂಗೇಶ್ವರ ಗುಡಿ, ನಾಸಾಬಲಿ ದರ್ಗಾ, ಟಿಪ್ಪು ಸ್ಮಾರಕ, ಶಂಕರಲಿಂಗ ಗುಡಿ, ಕಲ್ಯಾಣಪುರ, ಶಂಭುಲಿಂಗೇಶ್ವರ ಗುಡಿ ಸೇರಿದಂತೆ ಪಟ್ಟಣದ ಪ್ರತಿ ದೇಗುಲಕ್ಕೆ ತೆರಳಿ ಪೂಜೆ ನಮಸ್ಕರಿಸಿ, ಆರಾಧಿಸಿದರು. ನಂತರ ದಿ.ಮಾಜಿ ಸಚಿವ ಎಂ.ಎಸ್.ಕಟಗಿ ದಿ. ಕೆ.ಬಿ.ಹೊಳ್ಳಣ್ಣವರ ಅವರ ನಿವಾಸಕ್ಕೆ ತೆರಳಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಪಟ್ಟಣದ ಗಾಳಿಮರೆಮ್ಮ ಗುಡಿಯಿಂದ ಮೆರವಣಿಗೆ ಮೂಲಕ ಟಿಎಪಿಸಿಎಂಎಸ್ ಆರವಣಕ್ಕೆ ಸಕಲ ವಾದ್ಯ-ವೈಭವಗಳೊಂದಿಗೆ ಸಾವಿರಾರು ಕಾರ್ಯಕರ್ತರ ಜಯಘೋಷಗಳೊಂದಿಗೆ ಕರೆತರಲಾಯಿತು.

Leave a Comment