ನನ್ನ ಪ್ರಕಾರ ಕೆಲವು ದಿನಗಳ ಹಿಂದೆ

ಕೆಲವೇ ನಿಮಿಷ ಎಂದಿದ್ದ ಕಿಶೋರ್, ಪ್ರಿಯಾಮಣಿ ಜೊತೆಗೆ ಮಯೂರಿಯಂಥ ಕಲಾವಿದರು ಗಂಟೆಗಟ್ಟಲೆ ಕಥೆ ಕೇಳಿ ಚರ್ಚಿಸಿದ್ದಾರೆ. ಯೋಗ್‌ರಾಜ್ ಭಟ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಆರಂಭದಲ್ಲೆ ಚಿತ್ರರಂಗದ ಜನಪ್ರಿಯರನ್ನು ಸೆಳೆದಿರುವ ಹೊಸ ನಿರ್ದೇಶಕ ವಿನಯ್ ಬಾಲಾಜಿ ‘ನನ್ನ ಪ್ರಕಾರ’ ಚಿತ್ರದ ಮುಹೂರ್ತದಲ್ಲೇ ಹೊಸತನದ ಚಿತ್ರ ಕೊಡುವ ಭರವಸೆ ಮೂಡಿಸಿದ್ದಾರೆ.

ವಿನಯ್ ಬಾಲಾಜಿ ಸಂಕಲನ ಕೆಲಸ ಮಾಡುತ್ತಲೇ ಕಿರುಚಿತ್ರ ನಿರ್ದೇಶನಕ್ಕೆ ಇಳಿದವರು. ಅವರ ಮನಿ ಕಿರುಚಿತ್ರ ಮುಂಬೈ ಕಿರುಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ‘ನನ್ನ ಪ್ರಕಾರ’ ಕೆಲವು ದಿನಗಳ ಹಿಂದೆ ಎಂದಿರುವ ಟ್ಯಾಗ್‌ಲೈನ್‌ಗೆ ಚಿತ್ರದ ಕ್ಲೈಮ್ಯಾಕ್ಸ್ ನ್ಯಾಯ ಸಲ್ಲಿಸುತ್ತದಂತೆ. ಇಡೀ ಚಿತ್ರ ಫ್ಲಾಶ್‌ಬ್ಯಾಕ್‌ನಲ್ಲಿ ನಡೆಯುತ್ತದೆ.

ನಾಲ್ಕು ಜನರ ಕಥೆ ಒಟ್ಟೊಟ್ಟಿಗೆ ಸಾಗುತ್ತದೆ ಚಿತ್ರದ ಕೊನೆಯಲ್ಲಿ ಎಲ್ಲಾ ಒಂದೆಡೆ ಸೇರುತ್ತಾರೆ. ಈ ಕ್ಲೈಮ್ಯಾಕ್ಸ್ ಸತ್ಯ ಅಥವಾ ಸುಳ್ಳು ಆಗಿರಬಹುದ ಅದು ಹೇಗೆಂದರೆ ನನ್ನ ಪ್ರಕಾರ ಎಂದು ಹೇಳುವಂತಿರುತ್ತದೆ ಎನ್ನುವ ಕುತೂಹಲ ಕೆರಳಿಸುತ್ತಾರೆ ವಿನಯ್.  ಕೇವಲ ಹದಿನೈದು ನಿಮಿಷ ಕಥೆ ಕೇಳುತ್ತೇನೆ ಎಂದಿದ್ದ ಪ್ರಿಯಾಮಣಿ ನಾಲ್ಕುಗಂಟೆ ಪ್ರತಿ ಪಾತ್ರದ ಕಥೆ ಕೇಳುತ್ತ ಪೂರ್ತಿ ಕಥೆಯನ್ನೇ ಕೇಳಿ ಚರ್ಚಿಸಿದ್ದಾರೆ.

ಮದುವೆಯ ನಂತರ ಇದು ನನ್ನ ಮೊದಲನೇ ಸಿನೆಮಾ. ಅಮೃತ ಎನ್ನುವ ನನ್ನ ಪಾತ್ರ ಕೇಳಿದಾಗ ತುಂಬಾನೇ ಖುಷಿ ಆಯ್ತು. ಚಿತ್ರಕಥೆಯಲ್ಲಿ ಉತ್ತಮ ಹಿಡಿತವಿದೆ. ಕಿಶೋರ್ ಅವ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ ಈ ಎಕ್ಸೈಟ್‌ಮೆಂಟ್ ಇದೆ ಎಂದ ಪ್ರಿಯಾಮಣಿ ತಮ್ಮ ಅದೇ ಹೊಸ ಉತ್ಸಾಹದಲ್ಲಿ ಕಂಡರು. ನನ್ನದು ವಿಸ್ಮಯ ಎನ್ನುವ ಹೆಸರಿನ ಹುಡುಗಿಯ ಪಾತ್ರ. ಇಂಥ ಪಾತ್ರಕ್ಕಾಗಿ ನಾನು ಕಾಯತ್ತಿದ್ದೆ ಕಥೆ ನನ್ಗೆ ತುಂಬಾನೇ ಇಷ್ಟವಾಯ್ತು ಎಂದ ಮಯೂರಿ ಕೂಡ ವಿನಯ್‌ಗೆ ಕೊಟ್ಟಿದ್ದ ಸಮಯವನ್ನು ವಿಸ್ತರಿಸಿ ಕಥೆ ಕೇಳಿದ್ದಾರೆ.

ಸ್ಕ್ರಿಪ್ಟ್ ಇಷ್ಟವಾಯ್ತು ತನಿಖೆಯಲ್ಲಿ ನಡೆಯುವ ಕಥೆ ಹೊಸ ನಿರೂಪಣೆ ಇದೆ. ಚಿತ್ರ ನೋಡಿ ಹೊರ ಬರುವಾಗ ಜನ ನನ್ನ ಪ್ರಕಾರಕ್ಕೆ ಇರುವ ಕೆಲವು ದಿನಗಳ ಹಿಂದೆ ಎನ್ನುವ ಟ್ಯಾಗ್‌ಲೈನ್ ತಕ್ಕದ್ದಾಗಿದೆ ಎಂದುಕೊಳ್ಳುತ್ತಾರೆ.

ಸ್ಕ್ರಿಪ್ಟ್ ಎಷ್ಟು ಚೆನ್ನಾಗಿದೆ ಎಂದರೆ ಚಿತ್ರದ ಆರಂಭದಲ್ಲೇ ನನ್ಗೆ ಚಿತ್ರ ನೋಡಬೇಕು ಎನಿಸುತ್ತಿದೆ ಎಂದ ಕಿಶೋರ್ ಹೊಸತನದ ಸ್ಕ್ರಿಪ್ಟ್ ಮತ್ತು ಉತ್ಸಾಹಿ ಹೊಸತಂಡದಿಂದಾಗಿ ಚಿತ್ರ ಒಪ್ಪಿಕೊಂಡಿದ್ದಾರೆ. ವಿಹಾನ್ ಒಳ್ಳೆ ಪಾತ್ರದ ಜೊತೆಗೆ ನುರಿತ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವ ಖುಷಿಯನ್ನು ಹಂಚಿಕೊಂಡರು. ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಾಹಣ ಮತ್ತು ಅರ್ಜುನ್ ರಾಮು ಸಂಗೀತವಿದೆ.

Leave a Comment