ನನ್ನ ದುರಂಹಕಾರದಿಂದಲೇ ಆಳಕ್ಕೆ ಬಿದೆ

ನಾನು ನನ್ನದು ನನ್ನಿಂದಲೇ ಎಲ್ಲವೂ ಎನ್ನುವ ದುರಹಂಕಾರದಿಂದ ನಾನು ಬರೋಬರಿ ೧೮ ವರ್ಷಗಳ ಕಾಲ ಆಳಕ್ಕೆ ಬಿದ್ದೆ. ಹಲವು ಯಶಸ್ವಿ ಚಿತ್ರಗಳನ್ನು ಮಾಡಿದ್ದರೂ ಆಳಕ್ಕೆ ಬಿದ್ದ ನಾನು ಪಡಬಾರದ ಕಷ್ಟ ನೋವು ಕಂಡೆ”.

“ಒಬ್ಬ ನಾಯಕ ಬೇಡ ಎನಿಸಿ ಮತ್ತೊಬ್ಬರನ್ನು, ಅವರು ಬೇಡ ಎನಿಸಿ ಇನ್ನೊಬ್ಬರನ್ನು ಕೊನೆಗೆ ಯಾರೂ ಬೇಡ ಎನ್ನುತ್ತಾ ಹೊಸಬರನ್ನು ಹಾಕಿಕೊಂಡು ನಾನೇ ಮೇಲು ಎನ್ನುವ ಅಹಂಕಾರದಲ್ಲಿ ಓಡಾಡಿದೆ ವಿಷ್ಣುವರ್ಧನ್ ನನ್ನ ನೆಚ್ಚಿನ ನಾಯಕ ಆತನಿಂದ ನಾನು ಸಾಕಷ್ಟು ಗಳಿಸಿದ್ದೇನೆ ಆತನನ್ನು ನಾನು ಮರೆಯವ ಹಾಗಿಲ್ಲ. ದ್ವಾರ್‌ಕೀಶ್ ತಮ್ಮ ೫೫ ವರ್ಷಗಳ ಚಿತ್ರ ಬದುಕನ್ನು ಹಿಂದಿರುಗಿ ನೋಡುತ್ತಾ ಸ್ವವಿಮರ್ಶೆಗೆ ಇಳಿದು ನಿವೇದನೆ ಮಾಡಿಕೊಳ್ಳುತ್ತಿರುವಂತೆ ತೋರುತ್ತಿತ್ತು.

“ವಿಷ್ಣು ಜೊತೆಗಿನ ಜಗಳದಿಂದ ಸಾಕಷ್ಟು ಕಳೆದುಕೊಂಡೆ ಇಲ್ಲದಿದ್ದರೆ ನಾನು ೧೦೦ ಸಿನೆಮಾಗಳ ನಿರ್ಮಾಪಕನಾಗುತ್ತಿದೆ. ನಾನು ಮಾಡಿದ ಸಿನಿಮಾಗಳು ನನಗೆ ತೃಪ್ತಿ ತಂದುಕೊಟ್ಟಿದೆ ಇಷ್ಟು ವರ್ಷಗಳ ಸಿನಿ ಪಯಣ ನನಗೆ ಖುಷಿ ಕೊಟ್ಟಿದೆ” ಎಂದು ದ್ವಾರಕೀಶ್ ತಮ್ಮ ನಿರ್ಮಾಣದ ‘ಚೌಕ’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾದರು.

“ಹಣ ಆಸ್ತಿ ಜನಪ್ರಿಯತೆ ಎಲ್ಲವೂ ಒಟ್ಟಿಗೆ ಬಂದಾಗ ಅಹಂ ಯಾರಿಗೆ ಬರುವುದಿಲ್ಲ ಹೇಳಿ? ಮೇಯರ್ ಮುತ್ತಣ್ಣ ಸಿನೆಮಾ ಕೇವಲ ೧ಲಕ್ಷ ೧೦ ಸಾವಿರಕ್ಕೆ ಮುಗಿಸಿ ಆಗಿನ ಕಾಲಕ್ಕೆ ೫೦ ಸಾವಿರ ಲಾಭ ಮಾಡಿದೆ. ಅದನ್ನ ನೋಡಿದ ಹಲವು ಮಂದಿ ಮೂಕವಿಸ್ಮಿತರಾಗಿದ್ದರು.

ಯಶಸ್ವಿ ಚಿತ್ರಗಳ ನಂತರ ನನ್ನ ಅಹಂಕಾರ, ಎಲ್ಲವೂ ನಾನೇ ಎನ್ನುವ ಭ್ರಮೆ ಹೆಚ್ಚಾಯಿತು ಅದಕ್ಕಾಗಿ ಸಾಕಷ್ಟು ಬೆಲೆ ತೆತ್ತಿದ್ದೇನೆ. ನಿರ್ಮಾಪಕರಾಗಿರುವ ನನ್ನ ಮಕ್ಕಳಿಗೆ ನಾನು ಹೇಳುವುದಿಷ್ಟೆ ನನ್ನ ಅಹಂಕಾರ, ನಾನೇ ಎನ್ನುವ ಅಹಂನ ಬಿಟ್ಟು ನನ್ನಲ್ಲಿನ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಿ ಯಶಸ್ಸು ನಿಮ್ಮದಾಗಲಿದೆ ಎನ್ನುವುದಾಗಿದೆ” ಎಂದರು ದ್ವಾರಕೀಶ್.

ನಿರ್ದೇಶಕ ತರುಣ್, ನಟರಾದ ದಿಗಂತ್, ಪ್ರೇಮ್ ಮತ್ತು ಪ್ರಜ್ವಲ್  ಚಿತ್ರದ ಯಶಸ್ವಿಗೆ ಹರ್ಷ ವ್ಯಕ್ತಪಡಿಸಿದರು. ವಿತರಕ ಜಾಕ್ ಮಂಜು ಚಿತ್ರ ಎಲ್ಲಾ ಕಡೆಗಳಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ ಎಂದರು.

Leave a Comment