ನನ್ನ ಅಭಿಮಾನಿಗಳನ್ನು ಕೆಣಕಬೇಡಿ ದರ್ಶನ್ ಎಚ್ಚರಿಕೆ

ಬೆಂಗಳೂರು, ಸೆ ೧೭- ಚಂದನವನದಲ್ಲಿ ಸ್ಟಾರ್ ವಾರ್ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಮಧ್ಯೆ ಟ್ವೀಟ್ ವಾರ್ ಜೋರಾಗಿಯೇ ನಡೆದಿದ್ದು, ಇದರ ಮಧ್ಯೆ ನಟ ದರ್ಶನ್ ಟ್ವಿಟ್ ಮಾಡಿ ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಎಂದು  ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸದ್ಯಕ್ಕೆ ಕೇಳಿ ಬರುತ್ತಿರುವ ವದಂತಿಗಳಿಗೆ,   ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ, ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಪ್ರಚೋದಿಸಲು ಬರದಿರಿ ಎನ್ನುವ ಸಂದೇಶವನ್ನು ದರ್ಶನ್ ಟ್ವೀಟ್ ಮಾಡಿದ್ದಾರೆ.

ಕೆಲದಿನಗಳಿಂದ, ದರ್ಶನ್ ಅಭಿಮಾನಿಗಳು, ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿ, ಸುಳ್ಳವದಂತಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ದಾಸನ ಫ್ಯಾನ್ಸ್, ಪತ್ರವೊಂದನ್ನು ಹಾಕಿದ್ದು, ಆ ಚಿತ್ರ ಪೈರಸಿ ಆಗೋದಕ್ಕೆ ನಾವು ಕಾರಣವಲ್ಲ. ನಮ್ಮ ನಟನ ಹೆಸರು ದುರುಪಯೋಗ ಪಡಿಸಿಕೊಳ್ತಿದ್ದಾರೆ. ಜೊತೆ ಅಪಪ್ರಚಾರ ಮಾಡ್ತಿದ್ದಾರೆ. ಇದು ಸರಿಯಲ್ಲ ಎಂದು ದರ್ಶನ್ ವಿರೋಧಿಗಳಿಗೆ ಡಿಬಾಸ್ ಫ್ಯಾನ್ಸ್ ಬಹಿರಂಗ ಪತ್ರಬರೆದಿದ್ದಾರೆ. ಇದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಮಧ್ಯೆ ಟ್ವೀಟ್ ವಾರ್ ಶುರುವಾಗಿತ್ತು. ಆದರೆ ಇದೀಗ ಸ್ವತಹ ದರ್ಶನ್ ಅವರೇ ಟ್ವೀಟ್ ಮಾಡಿ ನನ್ನ ಅಭಿಮಾನಿಗಳ ವಿಚಾರಕ್ಕೆ ಬರಬೇಡಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಇನ್ನೊಂದೆಡೆ ಪೈಲ್ವಾನ್ ಚಿತ್ರದ ನಿರ್ಮಾಪಕಿ, ಸ್ವಪ್ನ ಕೃಷ್ಣ, ಸೈಬರ್ ಕ್ರೈಂಗೆ ಪೈರಸಿ ವಿರುದ್ಧ ದೂರು ನೀಡಿದ್ದಾರೆ. ಹಾಗೂ ಪೈಲ್ವಾನ್ ಚಿತ್ರ ಪೈರಸಿಯಾಗಿರುವುದಕ್ಕೆ ದರ್ಶನ್ ಅಭಿಮಾನಿಗಳು ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Comment