ನನಗೆ ಸಚಿವ ಸ್ಥಾನವೇ ಬೇಡ

ದಾವಣಗೆರೆ.ನ.8; ಸಚಿವನಾಗಬೇಕು ಎಂದು ಲಾಭಿಮಾಡಿಲ್ಲ ನನಗೆ ಸಚಿವ ಸ್ಥಾನವೇ ಬೇಡ ಎಂದು ಮುಖ್ಯಮಂತ್ರಿಗಳ ರಾಜಕೀಯ  ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದ ದೇವರಾಜ ಅರಸು ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿಂದು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಸೋಲುಕಂಡಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಅವರಿಗೆ ಹೇಳಿದ್ದೆ ಗೆದ್ದವರಿಗೆ ಅವಕಾಶ ನೀಡಬೇಕೆಂದು ಅದನ್ನ ಬಿಟ್ಟು ಅವರ ಬಗ್ಗೆ ನನಗೆ ಬೇಸರವಿಲ್ಲ. ಸವದಿ ಅವರು ನಾನು ಸ್ನೇಹಿತರು.
ಈ ಹಿಂದಿನ ಚುನಾವಣೆಯಲ್ಲಿ ನಾನು ಸೋತಿದ್ದೆ ಆ ಸಮಯದಲ್ಲಿ ನಾನು ಸುಮ್ಮನಿದ್ದೆ. ಈಗ ಅವರು ಸೋತಿದ್ದಾರೆ ಗೆದ್ದವರಿಗೆ ಅವಕಾಶ ನೀಡ ಬೇಕೆಂದು ಸಲಹೆ ನೀಡಿದ್ದೆ. ಆದರೆ ನಾನು ಸಚಿವ ಆಗಬೇಕು ಅಂತಾ ಲಾಭಿಮಾಡಿಲ್ಲ. ನನಗೆ ಸಚಿವ ಸ್ಥಾನವೇ ಬೇಡ. ಅತೃಪ್ತ ಶಾಸಕರಾದ ರಮೇಶ ಜಾರಕಿಹೊಳಿ ಅವರು ಡಿಸಿಎಂ ಆದರೆ ಸ್ವಾಗತ ಮಾಡುವೆ. ಜೊತೆಗೆ ಜಾರಕಿಹೊಳಿ ಕುಟುಂಬದ ರಮೇಶ್ ಹಾಗೂ ಬಾಲಚಂದ್ರ ನನ್ನ ಆತ್ಮೀಯರು ಎಂದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು,ಕಾರ್ಯಕರ್ತರು ಇದ್ದರು.

Leave a Comment