ನದಿ ಅಡ್ಡಗಟ್ಟಿ ಮರಳು ಸಾಗಣೆ

ಕಲಬುರಗಿ ಜ 12: ಕಲಬುರಗಿ ತಾಲೂಕಿನ ಫಿರೋಜಾಬಾದ ಮತ್ತು ಜೇವರಗಿ ತಾಲೂಕಿನ ಕೋಳಕೂರ ಗ್ರಾಮದ ನಡುವೆ ಹರಿಯುತ್ತಿರುವ ಭೀಮಾನದಿತೀರದಲ್ಲಿ ನದಿ ನೀರು ತಡೆಗಟ್ಟಿ ಮರಳು ಸಾಗಣೆ ಮಾಡಲಾಗುತ್ತಿದೆ. ಇದರಿಂದ ನದಿ ಸುತ್ತಲಿನ ರೈತರ ಜಮೀನು ಹಾಳಾಗುತ್ತಿವೆ ಎಂದು ಫಿರೋಜಾಬಾದದ ಅಬ್ದುಲ್ ಲತೀಫ್ ಎಸ್‍ಎಂ ಜಾಗಿರದಾರ ಮತ್ತು ರೈತರಾದ ಮಹಾದೇವಪ್ಪ ಪೂಜಾರಿ,ನಾಗಪ್ಪ ಬೇವಿನಗಿಡದ, ಶ್ರೀಮಂತ ಪೂಜಾರಿ ಮತ್ತು ಇತರರು ಮಾಧ್ಯಮದವರೆದುರು ತಮ್ಮ ಅಳಲು ತೋಡಿಕೊಂಡರು.
ಸರಕಾರವು ತಮಗೆ ಮರಳು ಸಾಗಿಸಲು ಅನುಮತಿ ನೀಡಿದೆ ಎಂದು ಮರಳು ಸಾಗಣೆದಾರರು ಗ್ರಾಮಸ್ಥರನ್ನು ವಂಚಿಸುತ್ತಿದ್ದಾರೆ.ಇದನ್ನು ಪ್ರಶ್ನಿಸಲು ಹೋದವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಇತರ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ
ಜಿಲ್ಲಾಡಳಿತವು ನದಿಯೊಳಗೆ ನಿರ್ಮಿಸಿದ ಅಕ್ರಮ ರಸ್ತೆಯನ್ನು ಕಿತ್ತುಹಾಕಿ, ರೈತರ ಜಮೀನು ಉಳಿಸಬೇಕು. ಅಕ್ರಮ ಮರಳು ಸಾಗಣೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

Leave a Comment