ನಡುರಸ್ತೆಯಲ್ಲೇ ಕಾರ್ ಭಸ್ಮ

ಉಡುಪಿ, ಸೆ.೯- ಕಾರೊಂದು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ರಾತ್ರಿ ೯ ಗಂಟೆಯ ಸುಮಾರಿಗೆ ನಗರದ ಜೋಡುಕಟ್ಟೆ ಸಮೀಪ ನಡೆದಿದೆ.
ಕೆಎ ೧೬ ಡಿ ೮೧೧೮ ನಂಬರಿ ಕಾರು ಇದಾಗಿದ್ದು, ಇದರ ಮಾಲಕರು ಯಾರು ಎಂಬುದು ತಿಳಿದು ಬಂದಿಲ್ಲ. ಚಲಿಸುತ್ತಿದ್ದ ಕಾರಿನಲ್ಲಿ ಒಮ್ಮೇಲೆ ಹೊಗೆ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಕಾರಿನಿಂದ ಇಳಿದು ಕೂಡಲೇ ಹೊರಗೆ ಓಡಿ ಹೋದರು. ತಕ್ಷಣವೇ ಕಾರು ಧಗಧಗೆ ಉರಿಯಿತ್ತೆನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment