ನಟ ಸನ್ನಿ ಡಿಯೋಲ್  ಯಡವಟ್ಟು .!

ನವದೆಹಲಿ, ಜೂ 18 – 17 ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಮಂಗಳವಾರವೂ ಹೊಸ ಸದಸ್ಯರ ಪ್ರಮಾಣ ವಚನ ಮುಂದುವರೆದಿದೆ

ನಟ, ರಾಜಕಾರಣಿ ಸನ್ನಿ ಡಿಯೋಲ್ ನೂತನ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಸದನ ಸಮಾವೇಶಗೊಂಡ ನಂತರ ಹಂಗಾಮಿ ಸಭಾಧ್ಯಕ್ಷ ವೀರೇಂದ್ರ ಕುಮಾರ್ ಅವರು ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಸನ್ನಿ ಡಿಯೋಲ್  ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಭರತ್ ಮಾತಾ ಕೀ ಜೈ ಎಂಬ ಘೋಷಣೆ ಸದನದಲ್ಲಿ ಮೊಳಗಿತು

ಮೊದಲ ಬಾರಿಗೆ ಸಂಸದರಾಗಿರುವ ಸನ್ನಿ ಡಿಯೋಲ್ ಅವರು ಗುರುದಾಸ್‌ಪುರ ಕ್ಷೇತ್ರದಿಂದ  ಎದುರಾಳಿ ಕಾಂಗ್ರೆಸ್ಸಿನ ಸುನಿ ಜಖಾರ್‌ ಅವರನ್ನು  82,459 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.

ಪ್ರಮಾಣವಚನ ಸ್ವೀಕರಿಸುವಾಗ, “ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ತಡೆಹಿಡಿಯುತ್ತೇನೆ” ಎಂದು ಬಾಯ್ತಪ್ಪಿನಿಂದ ಹೇಳಿ ಯಡವಟ್ಟು ಮಾಡಿಕೊಂಡರು.  ಕೂಡಲೇ ತಮ್ಮ  ತಪ್ಪನ್ನು ಸರಿಪಡಿಸಿಕೊಂಡು “ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ” ಎಂದು ನಂತರ ಸರಿಯಾಗಿ ಹೇಳಿದರು.

Leave a Comment