ನಟ ವಿನೋದ್ ರಾಜ್ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ

ಬೆಂಗಳೂರು, ಏ ೪- ರಾಜ್ಯದೆಲ್ಲೆಡೆ ದಿನೇ ದಿನೇ ಕೊರೊನಾ ಸೋಂಕು ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೆಲಿಬ್ರಿಟಿಗಳು ಒಂದಲ್ಲ ಒಂದು ರೀತಿ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆದರೆ ತಾಯಿ ಲೀಲಾವತಿಯೊಂದಿಗೆ ನಟ ವಿನೋದ್ ರಾಜ್ ಹಳ್ಳಿ ಸಂರಕ್ಷಣೆ ಮುಂದಾಗಿದ್ದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಣ್ಣದ ಲೋಕದಿಂದ ಈಗಾಗಲೇ ದೂರ ಉಳಿದಿರುವ ಅಮ್ಮ-ಮಗ ಹಳ್ಳಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಭೀತಿಯಲ್ಲೂ ಸ್ಥಳೀಯ ಜನರ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಹಳ್ಳಿಯ ಮೂಲೆಮೂಲೆಯಲ್ಲೂ ರಾಸಾಯನಿಕ ಸಿಂಪಡಣೆ ಮಾಡಿದಲ್ಲದೇ, ತಾವೇ ಬೆಳೆದ ಬೆಳೆಯನ್ನು ಉಚಿತವಾಗಿ ವಿತರಿಸಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊರೊನಾ ವೈರಸ್ ಬರದಂತೆ ತಡೆಯುವ ಏಕೈಕ ಉಪಾಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಸ್ವತಃ ನಾವು ಸ್ವಚ್ಛವಾಗಿರುವುದು, ಇದೇ ಸೂತ್ರವನ್ನು ವಿನೋದ್ ರಾಜ್ ತಮ್ಮ ಹಳ್ಳಿಯಲ್ಲಿ ಬಳಸಿದ್ದಾರೆ. ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆ ನಿಂತಿರುವ ವಿನೋದ್ ರಾಜ್ ಅವರು, ತಮ್ಮ ತೋಟಕ್ಕೆ ಬಳಸುವ ಕ್ರಿಮಿ ನಾಶಕವನ್ನೇ ಊರಿನಲ್ಲಿ ಸಿಂಪಡಿಸಿದ್ದಾರೆ. ತಮ್ಮದೇ ಟ್ರಾಕ್ಟರ್, ಸ್ಪ್ರೇಯರ್‌ಗಳನ್ನು ಬಳಸಿ ಅವರು ಈ ಕಾರ್ಯ ಮಾಡಿದ್ದಾರೆ.

ಆದರೆ ಸ್ಟಾರ್ ನಟರು ಏನೇ ಮಾಡಿದ್ದರು ದೊಡ್ಡ ದೊಡ್ಡ ಸುದ್ದಿಯಾಗುತ್ತದೆ. ನಟ ವಿನೋದ್ ರಾಜ್ ಮಾಡಿದ್ದ ಕೆಲಸ ಮಾತ್ರ ಯಾರು ಕಣ್ಣೀಗೆ ಕಾಣುವುದಿಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೊಂಕು ಭೀತಿಯಿಂದ ಅದೆಷ್ಟೋ ಮಂದಿ ಹಳ್ಳಿಗಳತ್ತ ಹೊರಟಿದ್ದಾರೆ. ಹೀಗಿರುವಾಗ ಹಳ್ಳಿ ಜನರ ಸುರಕ್ಷಗೆ ವಿನೋದ್ ರಾಜ್ ಒತ್ತು ನೀಡಿರುವುದು ಗಮನಾರ್ಹ

Leave a Comment