ನಟ ರಣವೀರ್ ಸಿಂಗ್ ಗೆ ನೋಟಿಸ್

ಬಾಲಿವುಡ್‌ನ ಭಾರಿ‌ ಬೇಡಿಕೆಯ ನಟ ರಣವೀರ್ ಸಿಂಗ್ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ವಿಚಿತ್ರ ಡ್ರೆಸ್ ಮೂಲಕ ಸೆಳೆದಿದ್ದರು. ಆದರೀಗ ಡಬ್ಯ್ಲೂಡಬ್ಯ್ಲೂಇ ಆಟಗಾರನಿಂದ ನೋಟಿಸ್ ಬಂದಿದೆ.

ಹೌದು, ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ವೇಳೆ ರಣವೀರ್ ಹಾರ್ದಿಕ್ ಪಾಂಡ್ಯ ಜತೆ ತೆಗೆಸಿಕೊಂಡ ಫೋಟೋ‌ ಒಂದಕ್ಕೆ, ಬ್ರೂಕ್ ಲೆನ್ಸರ್ ಅವರ ಈಟ್, ಸ್ಲೀಪ್, ಕಾನ್ಕರ್, ರಿಪೀಟ್ (ಊಟ, ನಿದ್ದೆ, ವಶಪಡಿಸಿಕೊಳ್ಳುವುದು ಹಾಗೂ ಪುನರಾವರ್ತಿಸು)ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಆದರೆ ಕಾನ್ಕರ್ ಬದಲಿಗೆ ಡಾಮಿನೇಟ್ ಎಂದು ಬಳಸಿದ್ದರು.

ಆದ್ದರಿಂದ ಬ್ರೂಕ್ ಲೆನ್ಸರ್ ಪರ‌ ವಕೀಲ ರಣವೀರ್ ಅವರಿಗೆ ಕಾನೂನು ನೋಟಿಸ್ ನೀಡಲಾಗಿದೆ ಎಂದು ಟ್ವೀಟರ್‌ನಲ್ಲಿ ಬರೆದಿದ್ದಾರೆ. ಇದು ಲೆನ್ಸರ್ ಕಾಪಿರೈಟ್ ಹೊಂದಿರುವ ಸಾಲು ಎಂದಿದ್ದಾರೆ.

ಲೆನ್ಸರ್ ಅವರ ಜನಪ್ರಿಯ ಸಾಲುಗಳನ್ನು ಅವರ ಅನುಮತಿ ಇಲ್ಲದೇ ಪಡೆಯಲಾಗಿದೆ. ಇದು ಕಾನೂನು‌ಬಾಹಿರ, ಆದ್ದರಿಂದ ನಾನು ಕಾನೂನು ಹೋರಾಟ ನಡೆಸುವುದಾಗಿ ವಕೀಲ ಪೌಲ್ ಹೆಮ್ಯಾನ್ ಹೇಳಿದ್ದಾರೆ. ಈ ನೋಟಿಸ್‌ಗೆ ಮುಂದಿನ ದಿನದಲ್ಲಿ ಯಾವ ರೀತಿ ರಣವೀರ್ ಉತ್ತರಿಸಲಿದ್ದಾರೆ ಎನ್ನುವುದನ್ನು ಕಾದು ನೀಡಬೇಕಿದೆ.

Leave a Comment