ನಟ ಪ್ರಜ್ವಲಗೆ ನಿದ್ರಾಹೀನತೆ ಮುಂಬೈನಲ್ಲೊಬ್ಬ ಜಂಟಲ್‌ಮ್ಯಾನ್

ಮನುಷ್ಯನ ಜೀವನದಲ್ಲಿ ನಿದ್ರೆ ಬಹುಮುಖ್ಯವಾದುದು. ದಿನವೊಂದಕ್ಕೆ ಕನಿಷ್ಠ ಎಂಟು ಗಂಟೆಯಾದರೂ ನಿದ್ರೆ ಅಗತ್ಯ. ಆದರೆ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಿದರೆ ಆ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಎನ್ನುವುದ ಸಹಜ.

ಇಂತಹುದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಿರ್ಮಾಪಕ ಗುರು ದೇಶಪಾಂಡೆ ನಿದ್ರೆಯ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಇದಕ್ಕಾಗಿ ಹಲವು ವೈದ್ಯರನ್ನು ಸಂಪರ್ಕಿಸಿ ನಿದ್ರಾ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸಂಪರ್ಕ ಪಡೆದು ಅವರ ಅಭಿಪ್ರಾಯ ಆಲಿಸುವ ಕೆಲಸ ಮಾಡಿದ್ದಾರೆ.

ಜಂಟಲ್‌ಮ್ಯಾನ್ ಚಿತ್ರದಲ್ಲಿ ನಾಯಕನಾಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದು ನಿಶ್ವಿಕಾ ನಾಯಕಿ, ಉಳಿದಂತೆ ಹಿರಿ ಕಿರಿಯ ಕಲಾವಿದರ ದಂದು ಚಿತ್ರದಲ್ಲಿದೆ.”ಜಡೇಶ್ ಕುಮಾರ್ ಹಂಪಿ” ನಿರ್ದೇಶನ ಮಾಡಿದ್ದಾರೆ.

ದಿನಕ್ಕೆ “೧೮ ಗಂಟೆ ನಿದ್ದೆ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಒಂದು ರೀತಿ ಕುಂಬಕರ್ಣನ ಪಾತ್ರ ಮಾಡಿದ್ದಾರೆ.ಆಧುನಿಕ ಜೀವನಶೈಲಿಯಿಂದ ಮನುಷ್ಯನಿಗೆ ಎದುರಾಗುತ್ತಿರುವ ಹಲವು ಕಾಯಿಲೆಯಲ್ಲಿ ನಿದ್ರೆಯೂ ಒಂದು. ಜಂಟಲ್ ಮ್ಯಾನ್ ಚಿತ್ರ ಇದೇ ಫೆಬ್ರವರಿ ೭ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಖಳನಾಯಕನಾಗಿ “ಅರ್ಜುನ್” ನಟಿಸಿದ್ದಾರೆ.

೧೮ ಗಂಟೆ ನಿದ್ದೆಮಾಡುವಂತಹ ಕಾಯಿಲೆ ನಿಜವಾಗಿಯೂ ಇಲ್ಲ ಎಂದು ಹಲವರು ವಾದಿಸಬಹುದು. ಆದರೆ, ಜಂಟಲ್‌ಮ್ಯಾನ್‌ನ ಚಿತ್ರ ತಂಡವು ಅಂತಹ ಒಬ್ಬ ’ನಿಜವಾದ ಜೆಂಟಲ್ ಮ್ಯಾನ್’ನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

rajeev

ಮುಂಬೈನಲ್ಲಿ ೪೩ ವರ್ಷದ ರಾಜೀವ್ ಭಾಸಿನ್, ೧೦ ವರ್ಷಗಳಿಂದ “ಹೈಪರ್ಸೋಮ್ನಿಯಾ” ಖಾಯಿಲೆಯಿಂದ ಬಳಲುತ್ತಿದ್ದಾರೆ. ಮೊದಲ ಬಾರಿ ೧೬ನೇ ವಯಸ್ಸಿನಲ್ಲಿ ಆ ಸಮಸ್ಯೆ ಅವರಿಗೆ ಕಾಡಿತ್ತು. ನಂತರ ಅವರ ೩೩ ನೇ ವಯಸ್ಸಿಗೆ ಮತ್ತೆ ಕಾಡತೊಡಗಿತು. ಪ್ರಜ್ವಲ್ ದೇವರಾಜ್ ಜಂಟಲ್ ಮ್ಯಾನ್‌ನಲ್ಲಿನ ೧೮ ಗಂಟೆಗಳ ಕಾಲ ನಿದ್ರಿಸಿದರೆ, ರಾಜೀವ್ ಭಾಸಿನ್ ಒಂದು ಸಮಯದಲ್ಲಿ ದಿನಕ್ಕೆ ೨೦ ಗಂಟೆಗಳ ಕಾಲ ನಿದ್ರಿಸುತಿದ್ದರು!

ಸಂತಸದ ಸಂಗತಿ
“ಕನ್ನಡದಲ್ಲಿ ’ಜಂಟಲ್ ಮ್ಯಾನ್’ ಚಿತ್ರ ನಿರ್ಮಾಣದ ಬಗ್ಗೆ ಸೋಶಿಯಲ್ ಮೀಡಿಯಾದ ಮೂಲಕ ತಿಳಿದುಕೊಂಡೆ. ಸ್ಲೀಪಿಂಗ್ ಡಿಸಾರ್ಡರ್ ಸುತ್ತಲೂ ಚಿತ್ರ ನಿರ್ಮಿಸಲಾಗಿರುರುವು ಸಂತಸದ ಸಂಗತಿ. ಇಂತಹ ಕಾಯಿಲೆಗಳಿಂದ ಬಳಲುತ್ತಿರುವ ಬಹಳಷ್ಟು ಜನರಿದ್ದಾರೆ. ಅವರ ದುಃಖಕರ ಸಂಗತಿ ಎಂದರೆ ಇಂತಹ ಕಾಯಿಲೆ ಹೊಂದಿರುವವರಲ್ಲಿ ಹೆಚ್ಚಿನವರಿಗೆ ಆ ಕಾಯಿಲೆ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲ. ಹೀಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಿಲ್ಲ. ಈ ಚಿತ್ರ ಜಾಗೃತಿ ಮೂಡಿಸುವಲ್ಲಿ ಸಹಕಾರಿ ಆಗುತ್ತೆಂದು ನನ್ನ ನಂಬಿಕೆ,” ಎಂದು ರಾಜೀವ್ ಭಾಸಿನ್ ಹೇಳಿದ್ದಾರೆ.

Leave a Comment