ನಟಿ ಮಯೂರಿ ಹೊಸ ಇನ್ಸಿಂಗ್ಸ್

ಬೆಂಗಳೂರು.ಜೂ.11- ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದ ನಟಿ ಮಯೂರಿ ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.

ಬಾಲ್ಯದ ಗೆಳೆಯ ಅರುಣ್ ಅವರೊಂದಿಗೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.
ನಟಿ ಮಯೂರಿ ಮತ್ತು ಅರುಣ್ ಬಾಲ್ಯದ ಸ್ನೇಹಿತರಾಗಿದ್ದು, ಅರುಣ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹತ್ತು ವರ್ಷದ ಗೆಳೆತನಕ್ಕೆ ಮಯೂರಿ ಅರುಣ್ ಜೊತೆಗೆ ಮದುವೆಯ ಮುದ್ರೆ ಒತ್ತಲು ಮುಂದಾಗಿದ್ದಾರೆ.
ಮಯೂರಿ ಅವರು ‘ಅಶ್ವಿನಿ ನಕ್ಷತ್ರ’ ಕಿರುತೆರೆ ಪ್ರವೇಶಿಸಿ, ಬಳಿಕ ‘ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ‘ಇಷ್ಟಕಾಮ್ಯ’, ‘ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.
ಸಂಪೂರ್ಣ ಹೊಸಬರೇ ಇರುವ ‘ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.

ಕಿರುತೆರೆಯಲ್ಲಿ ಮಿಂಚು:
ಕಿರುತೆರೆಯಲ್ಲಿ ಮೂಡಿ ಬರುತ್ತಿದ್ದ ಅಶ್ವಿನಿ ನಕ್ಷತ್ರ. ಧಾರಾವಾಹಿ ಮೂಲಕ ಬಣ್ಣದ ಬದುಕಿನಲ್ಲಿ ಮಿಂಚು ಹರಿಸಿದ್ದರು. ಅಲ್ಲಿನ ಯಶಸ್ಸು ಚಿತ್ರರಂಗಕ್ಕೆ ಕರೆತಂದಿತ್ತು..ಇದೀಗ ವಿವಾಹವಾಗುತ್ತಿದ್ದಾರೆ.‌ ಮದುವೆಯ ಬಳಿಕ. ಸಿನಿಮಾದಲ್ಲಿ ಮುಂದುವರಿಯುತ್ತಾರೆ ಇಲ್ಲವೇ ಎನ್ನುವುದು ಸದ್ಯಕ್ಕಿರುವ ಕುತೂಹಲ.

Share

Leave a Comment