ನಟಿ ಪ್ರಿಯಾಂಕ ಛೋಪ್ರಾಗೆ ಜಿಂದಾಬಾದ್ ಕೂಗಿದ ಕೈನಾಯಕ

ನವದೆಹಲಿ, ಡಿ ೨- ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಕೈನಾಯಕಿ ಪ್ರಿಯಾಂಕ ಗಾಂಧಿ ಎಂದು ಕೂಗುವ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾಗೆ ಜಿಂದಾಬಾದ್ ಎಂದು ಕೂಗಿ ಕೈನಾಯಕ ಎಡವಟ್ಟು ಮಾಡಿಕೊಂಡಿದ್ದಾರೆ.

ನವದೆಹಲಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಜೈಕಾರ ಕೂಗುವ ವೇಳೆ ಪ್ರಿಯಾಂಕಾ ಗಾಂಧಿ ಬದಲು ಪ್ರಿಯಾಂಕಾ ಚೋಪ್ರಾ ಎಂದು ಘೋಷಣೆ ಮೊಳಗಿಸಿ ದೆಹಲಿಯ ಬಾವಾನ ಕ್ಷೇತ್ರದ ಶಾಸಕರಾದ ಸುರೇಂದ್ರ ಕುಮಾರ್ ಅವರು ಪೇಚಿಗೆ ಸಿಲುಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕಾಂಗ್ರೆಸ್ ಪಾರ್ಟಿ ಜಿಂದಾಬಾದ್, ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್, ಪ್ರಿಯಾಂಕಾ ಗಾಂಧಿ ಎನ್ನುವ ಬದಲಿಗೆ ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದ ಕಾಂಗ್ರೆಸ್ ಮುಖಂಡ ಸುರೇಂದ್ರ ಕುಮಾರ್ ಯಡವಟ್ಟು ಮಾಡಿಕೊಂಡಿದ್ದಾರೆ.

ತಕ್ಷಣವೇ ಎಚ್ಚೆತ್ತ ದೆಹಲಿಯ ಕಾಂಗ್ರೆಸ್ ಮುಖ್ಯಸ್ಥ ಸುಭಾಷ್, ಪ್ರಿಯಾಂಕಾ ಗಾಂಧಿ ಎಂದು ತಿದ್ದುಪಡಿ ಮಾಡಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಸುರೇಂದ್ರ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಯಾವಾಗ ಕಾಂಗ್ರೆಸ್ ಸೇರಿದರು ಎಂದು ಹಲವರು ಕಿಚಾಯಿಸಿದ್ದರೆ, ಸದ್ಯ ರಾಹುಲ್ ಗಾಂಧಿ ಬದಲಿಗೆ ರಾಹುಲ್ ಬಜಾಜ್ ಅಂದಿಲ್ಲ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

Leave a Comment