ನಟಿ ಕಂಗನಾ ರನೌತ್‌ ವಿರುದ್ಧ ದೂರು

ಮುಂಬೈ, ಏ ೨೪- ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ದ ಮುಂಬೈ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ದಿಷ್ಟ ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿದ ಆರೋಪದ ಮೇಲೆ ಕಂಗನಾ ವಿರುದ್ಧ ದೂರು ದಾಖಲಿಸಲಾಗಿದೆ. ತಮ್ಮ ಸೋದರಿ ರಂಗೋಲಿ ಚಂಡೆಲ್ ಅವರಿಗೆ ಬೆಂಬಲ ನೀಡಿ ಮಾತನಾಡುವ ವಿಡಿಯೊವೊಂದನ್ನು ಕಂಗನಾ ರಾನಾವತ್ ಬಿಡುಗಡೆ ಮಾಡಿದ್ದರು.

ಅದರಲ್ಲಿ ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದಕರು ಎಂದು ಸಂಬೋಧಿಸಿದ್ದರು ಎಂದು ಅಲಿ ಕಶಿಫ್ ಖಾನ್ ದೇಶ್ ಮುಖ್ ಎಂಬ ವಕೀಲರು ಮುಂಬೈಯ ಅಂಬೊಲಿ ಉಪನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ದ್ವೇಷದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ರಂಗೋಲಿ ಚಂಡೆಲ್ ಅವರ ಟ್ವಿಟ್ಟರ್ ಅಕೌಂಡ್ ರದ್ದಾಗಿತ್ತು.

Leave a Comment