ನಟಿ ಅನುಪಮಾ- ಬುಮ್ರಾ ಲವ್ವಿಡವ್ವಿ ವಿವಾದಕ್ಕೆ ತೆರೆ

ನವದೆಹಲಿ, ಜು ೧೦- ಪ್ರಸಕ್ತ ವಿಶ್ವಕಪ್‌ನಲ್ಲಿ ಯಾರ್ಕರ್ ದಾಳಿಯಿಂದಲೇ ಎದುರಾಳಿಗಳಿಗೆ ನಡುಕು ಹುಟ್ಟಿಸಿರುವ ಟೀಂ ಇಂಡಿಯಾದ ಯಾರ್ಕರ್ ಮಾಂತ್ರಿಕ ಜಸ್ಪ್ರೀತ್ ಬುಮ್ರಾ ತನ್ನ ಟ್ವಿಟರ್‌ನಲ್ಲಿ ನಟಸಾರ್ವಭೌಮ ನಟಿ ಅನುಮಪ ಪರಮೇಶ್ವರನ್ ಅವರನ್ನು ಅನ್ ಫಾಲೋ ಮಾಡುವ ಮೂಲಕ ಇಬ್ಬರಿಗೂ ತಳುಕು ಹಾಕಿಕೊಂಡಿದ್ದ ಲವ್ವಿಡವ್ವಿಗೆ ಬ್ರೇಕ್ ಹಾಕಿದ್ದಾರೆ.

ಇತ್ತೀಚೆಗೆ ಟ್ವಿಟರ್‌ನಲ್ಲಿ ಬುಮ್ರಾ ಫಾಲೋ ಮಾಡುತ್ತಿರುವ ೨೫ ಮಂದಿಯಲ್ಲಿ ಬಹುತೇಕರು ಕ್ರಿಕೆಟಿಗರೇ ಹಾಗೂ ನಟಿ ಅನುಮಪ ಪರಮೇಶ್ವರನ್ ಕೂಡ ಒಬ್ಬರಾಗಿದ್ದರು. ಆದರೆ ಇದನ್ನು ಗಮನಿಸಿದ ನೆಟ್ಟಿಗರು ಇಬ್ಬರ ಮಧ್ಯೆ ಕುಚ್ ಕುಚ್ ನಡೆಯುತ್ತಿದೆ ಎಂದು ಭಾರಿ ಸುದ್ದಿ ಮಾಡಿದ್ದರು. ಇದನೆಲ್ಲಾ ದೂರದ ಲಂಡನ್‌ನಿಂದಲೇ ಗಮನಿಸುತ್ತಿದ್ದ ಬುಮ್ರಾ ಅವರು ಯಾವುದಕ್ಕೂ ಪ್ರತಿಕ್ರಿಯಿಸಿದೇ ಗಪ್‌ಚುಪ್ ಆಗಿದ್ದರು.

ಪದೇ ಪದೇ  ಬುಮ್ರಾ ಹಾಗೂ ಅನುಪಮಾ ಸಂಬಂಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು.  ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ರೀತಿಯೇ ಇವರ ಜೋಡಿಯೂ ಕಾಣಲಿದೆ ಎಂದು ಟ್ರೋಲ್ ಮಾಡಲಾಗಿತ್ತು. ಈ ವಿಚಾರ ಬುಮ್ರಾಗೆ ತೀವ್ರ ಬೇಸರ ತಂದಿದ್ದು, ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ನಟಿ ಅನುಪಮಾ ಪರಮೇಶ್ವರನ್ ಅವರು ನಾವಿಬ್ಬರು ಒಳ್ಳೆ ಸ್ನೇಹಿತರು, ಇದರಿಂದಾಗಿ ಪ್ರೇಮಕಥೆಯೊಂದು ಹುಟ್ಟಿಕೊಂಡಿದೆ ಆದರೆ ನಾವು ಇಂತಹ ವಿಷಯಗಳಿಂದ ದೂರವಿರಲು ಪ್ರಯತ್ನಸುತ್ತೇವೆ ಎಂದು ಹೇಳಿದ್ದರು. ಮತ್ತೆ ಈ ಸುದ್ದಿ ಹರಿದಾಡುತ್ತಿತ್ತು.  ಇದಕ್ಕೆ ಟ್ವಿಟ್ಟರ್‌ನಲ್ಲಿ ಬುಮ್ರಾ ಅನುಪಮ ಅವರನ್ನು ಫಾಲೋ ಮಾಡುತ್ತಿರುವುದೇ ಕಾರಣವಾಗಿತ್ತು. ಹಾಗಾಗಿ ಅನುಮಪ ಅವರನ್ನು ಅನ್ ಫಾಲೋ ಮಾಡಿ ಬುಮ್ರಾ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈಗ ಬುಮ್ರಾ ಟ್ವಿಟರ್‌ನಲ್ಲಿ ಕೇವಲ ೨೪ ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ ಎಂದು ತೋರಿಸುತ್ತಿದೆ.

 

Leave a Comment