ನಟನೆಯ ಮೋಹ ಉದ್ಯೋಗ ಬಿಟ್ಟ ಅಂಜಲಿ

ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತ ಕಲಾವಿದರ ದಂಡೇ ಆಗಮಿಸುತ್ತಿದೆ. ನಟನೆ, ನಿರೂಪಣೆ, ನೃತ್ಯ ಹೀಗೆ ಹಲವು ವಿಭಾಗಗಳಲ್ಲಿ ಸೈ ಎನಿಸಿಕೊಂಡಿರುವ ಬಹುಮುಖ ಪ್ರತಿಭೆ ಅಂಜಲಿ ಚಿತ್ರರಂಗದಲ್ಲಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಈ ಹಿಂದೆ ’ರನ್ ಆಂಟನಿ’,’ಕಿರುಗೂರಿನ ಗಯ್ಯಾಳಿಗಳು” ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅಂಜಲಿ, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ’ಮನೋರಥ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾಸೀಟೀವ್ ಮತ್ತೊಂದು ನೆಗೆಟೀವ್ ಶೇಡ್ ಇರುವ ಪಾತ್ರ.
ಮೊದಲ ಚಿತ್ರ ಬಿಡುಗಡೆಯ ಹೊಸ್ತಿಲ್ಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ಕೈ ತುಂಬ ಸಂಬಳ ಬರುತ್ತಿದ್ದ ಸಾಪ್ಟ್‌ವೇರ್ ಉದ್ಯೋಗ ಬಿಟ್ಟು ನಟನೆಯತ್ತ ಬಂದಿದ್ದಾರೆ.
ಭರತ ನಾಟ್ಯ ಮತ್ತು ಕಾಂಟೆಂಪರರಿ ವಿಭಾಗದಲ್ಲಿ ವಿದ್ವತ್ ಪಡೆದಿದ್ದಾರೆ.ಅಲ್ಲದೆ ತಮ್ಮದೇ ಆದ ಅಂಜಲಿ ನೃತ್ಯ ಶಾಲೆ ಆರಂಭಿಸಿ ನೂರಾರು ನೃತ್ಯಾಸಕ್ತರನ್ನು ತಯಾರು ಮಾಡುತ್ತಿದ್ದಾರೆ. ಚಿತ್ರ ಈ ವಾರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮನದಾಳ ಹಂಚಿಕೊಂಡರು.
ಓದಿರುವುದು ಇಂಜಿನಿಯರ್, ಸಾಪ್ಟ್‌ವೇರ್ ಕಂಪನಿಯಲ್ಲಿ ಕೈ ತುಂಬ ಸಂಬಳ ಬರುತ್ತಿದ್ದ ಉದ್ಯೋಗದಲ್ಲಿದ್ದೆ. ನಟನೆಯ ಮೋಹ ಚಿತ್ರರಂಗದ ಕಡೆಗೆ ತಮ್ಮನ್ನು ಆಕರ್ಷಿಸಿದೆ. ಇಲ್ಲಿಯೇ ಏನಾದರೂ ಸಾಧನೆ ಮಾಡಬೇಕೆನ್ನುವ ಹಂಬಲ ಮತ್ತು ಕನಸಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿಯೇ ಸಂಪೂರ್ಣ ತೊಡಗಿಸಿಕೊಳ್ಳುವ ಉದ್ದೇಶವಿದೆ ಎಂದರು ಅಂಜಲಿ.
ಮನೋರಥ ಈ ವಾರ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ’ಸ್ವಚ್ಚ ಕರ್ನಾಟಕ’, ಮತ್ತು ಪಂಚರ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಈ ಚಿತ್ರಗಳ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಾಗಿದೆ. ಈ ಮಧ್ಯೆ ಮತ್ತೆರಡು ಚಿತ್ರಗಳ ಅವಕಾಶ ಬಂದಿದ್ದು ಅವುಗಳ ಬಗ್ಗೆಯೂ ಮಾತುಕತೆ ನಡೆದಿದೆ.
ಮೊದಲಿನಿಂದಲೂ ನಟಿಯಾಗುವ ಆಸೆ ಇತ್ತು. ಅದು ಈಗ ನೆರವೇರಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದೇನೆ. ಈ ಹಿಂದೆ ನಿರೂಪಕಿಯಾಗಿ ಕೆಲಸ ಮಾಡಿದ ಅನುಭವ ನಟನೆ ಪೂರಕವಾಗಿದೆ ಎಂದು ಹೇಳಿಕೊಂಡರು.

ನಟನೆ, ನಿರೂಪಣೆ, ನೃತ್ಯ ಹೀಗೆ ವಿವಿಧ ಪ್ರಾಕಾರಗಳ್ಲಲಿ ತಮ್ಮದೇ ಛಾಪು ಮೂಡಿಸಿರುವ ಅಂಜಲಿ ನಾಯಕಿಯಾಗಿಯೂ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದರ ಆರಂಭದ ಹೆಜ್ಜೆ ಎನ್ನುವಂತೆ ಮನೋರಥ ಈ ವಾರ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

Leave a Comment