ನಗೆಗಡಲಲ್ಲಿ ತೇಲಿದ ವಿಧಾನಸಭೆ

ಬೆಂಗಳೂರು, ಫೆ 12- ಧ್ವನಿ ಸುರಳಿ ಪ್ರಕರಣವನ್ನ ಎಸ್ಐಟಿ ತನಿಖೆಗೆ ವಹಿಸಲು ನಮ್ಮ ಅನುಮತಿ ಇಲ್ಲ, ಸದನ ಸಮಿತಿ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಇಂದೂ ಸದನದಲ್ಲೂ ಮುಂದುವರೆಯಿತು.

ಚರ್ಚೆ ಆರಂಭಿಸಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಜೆಟ್ಗಿಂತ ಸಿಡಿ ಬಿಡುಗಡೆಯೇ ಮುಖ್ಯವಾಗಿತ್ತೇ ಎಂದು ಪ್ರಶ್ನಿಸಿದರು.

ಈ ವೇಳೆ ಪದೇ ಪದೇ ಸ್ಪೀಕರ್ ಮೇಲೆ ಗೌರವ ಅನ್ನುತ್ತಲೇ ಮಾತು ಆರಂಭಿಸಿ, ಸಿಡಿಯಲ್ಲಿ ಸ್ಪೀಕರ್ಗೆ ಲಂಚ ವಿಷಯ ಪ್ರಸ್ತಾಪ ಆದಾಗ, ಮಧ್ಯಪ್ರವೇಶಿಸಿದ ಸ್ಪೀಕರ್, ರೇಪ್ ಆದ ಆರೋಪಿ ಕೋರ್ಟ್ಗೆ ಹೋದಾಗ ಆಗುವ ವಿಷಯ ಪ್ರಸ್ತಾಪಿಸಿದರು.

ಕೋರ್ಟ್ನಲ್ಲಿ  ರೇಪ್ ಆರೋಪಿಗೆ ವಕೀಲರು ಪದೇ ಪದೇ ಪ್ರಶ್ನೆ ಕೇಳಿ ನೂರಾರು ಬಾರಿ ರೇಪ್ ಮಾಡ್ತಾರೆ ಎಂದು ಹಾಸ್ಯವಾಗಿ ಹೇಳಿದರು. ಸ್ಪೀಕರ್ ಈ ಮಾತು ಇಡೀ ಸದನವನ್ನ ನಗೆ ಗಡಲಿಲ್ಲ ತೇಲಿಸಿತು.  ಇನ್ನು ಜಗದೀಶ್ ಶೆಟ್ಟರ್ ಈ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರೇ ಆರೋಪಿ ನಂಬರ್ ಒನ್ ಎಂದು ಆರೋಪಿಸಿದರು.

Leave a Comment