ನಗು ಹೃದಯವನ್ನು ಗೆಲ್ಲುತ್ತದೆ

ಚನ್ನಗಿರಿ.ಜು.11; ವಿನಯ-ವಿಶ್ವಾಸವನ್ನು ಗೆಲ್ಲುತ್ತದೆ. ನಗು-ಹೃದಯವನ್ನು ಗೆಲ್ಲುತ್ತದೆ ಇರುವ ಕೆಲಸವನ್ನು ಮನವಿಟ್ಟು ಮಾಡು, ಎಲ್ಲಾರೊಳಗೆ ನೀನೊಬ್ಬನಾಗು ಮಂಕುತಿಮ್ಮ ಎಂದು ವಕೀಲ ಹಾಗೂ ಸಾಹಿತಿ-ವಿನಯ್‍ಕುಮಾರ್ ಸಾಹುಕಾರ ಹೇಳಿದರು.ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಏರ್ಪಡಿಸಿದ್ದ “ಮಾಸದ ಮಾತು” ಸಾಹಿತಿಕ ಕಾರ್ಯಕ್ರಮದಲ್ಲಿ “ಮಂಕುತಿಮ್ಮನ ಕಗ್ಗದ ಸಾಮಾಜಿಕತೆ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಬಡದೇಶವಾದ ಭಾರತದಲ್ಲಿ ಪರಮಾತ್ಮನೇ ನ್ಯಾಯಧೀಶನಾಗಿ ಪ್ರತಿ ಫಲ ಬಯಸದೇ ನ್ಯಾಯ ಮತ್ತು ಸಂದೇಶ ನೀಡುವುದಾಗಿದೆ. ಕಣಜದಲ್ಲಿ ಉಪಯೋಗಕ್ಕೆ ಬೇಕಾದಷ್ಟು ಮಾತ್ರ ಆಹಾರ ಸಂಗ್ರಹಣೆ ಮಾಡುತ್ತಿದ್ದ ಕಾಲವನ್ನು ಜೀವನದ ಕರ್ಮಫಲ ಸೂಚಿಸುವುದಾಗಿತ್ತು. ಆಕಳ ಕರು ಸಾವಿರ ಹಿಂಡಿನಲ್ಲಿದ್ದರೂ ತನ್ನ ತಾಯಿಯನ್ನು ಹುಡುಕಿ ಸೇರುವುದಾಗಿದೆ. ಇದೇ ರೀತಿಯಲ್ಲಿ ಮನುಷ್ಯನ ಪಾಪ-ಕರ್ಮಗಳು ಜನ್ಮ ಜನ್ಮಾಂತರದಿಂದಲೂ ಪ್ರತಿ ಫಲ ಪಡೆಯುವುದಾಗಿದೆ. ಆತ್ಮಕ್ಕೆ ಸಾವಿಲ್ಲ. ಆತ್ಮ ಯಾವಾಗಲೂ ಪವಿತ್ರವಾಗಿರುತ್ತದೆ. ಸ್ವಾತಿ ಮಳೆಯ ಒಂದು ಹನಿಯನ್ನು ಶಂಖ ಹುಳು ಸ್ವೀಕರಿಸಿ ಮುತ್ತನ್ನು ನೀಡುವುದು ಪ್ರಕೃತಿಯ ವಿಸ್ಮಯ ನಂಬಿಕೆ ಇದ್ದರೆ, ಬೆಂಕಿನೂ ಸುಡುವುದಿಲ್ಲ ಎಂಬ ಸತ್ಯ ಪ್ರಪಂಚಕ್ಕೆ ತಿಳಿದಿದೆ ಎಂದು ಮಂಕುತಿಮ್ಮನ ಕಗ್ಗದ ಸಾಮಾಜಿಕ ವಿಷಯಗಳ ಬುತ್ತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಕೀಲ ಬಳ್ಳಾರಿ ರುದ್ರಪ್ಪ, ಪ್ರಸನ್ನಗೌಡರ್, ಬನ್ನಿಕೋಡ್ ದೇವು, ಓಬಳೇಶ್, ಮಹಿಳಾ ಸಾಹಿತಿ ಸುನೀತರಾಜು, ಶಿಕ್ಷಕಿ ಸುನೀತ, ಎಂ.ಬಿ.ನಾಗರಾಜ್, ಸಾಹಿತಿ ಫೈಜ್ನಟ್ರಾಜ್ ಉಪಸ್ಥಿತರಿದ್ದರು.

Leave a Comment