ನಗರ ಸಭೆ ಚುನಾವಣೆ: ಕಾಂಗ್ರೆಸ್‌ಗೆ ನಿಶ್ಚಳ ಬಹುಮತ

ಅಧಿಕಾರ ಮಾತ್ರ ಜೆಡಿಎಸ್ ತೆಕ್ಕಗೆ !!!
ಸಿಂಧನೂರು.ಸೆ.೩- ನಗರ ಚುನಾವಣೆಗೆ ಇಂದು ನಡೆದ ಮತ ಏಣಿಕೆಯಲ್ಲಿ ಕಾಂಗ್ರೆಸ್ ೨೦ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ನಿಶ್ಚಳ ಬಹುಮತ ಸಾಧಿಸಿತು.
ನಗರ ಸಭೆ ೩೧ವಾರ್ಡ್‌ಗಳಲ್ಲಿ ಕಾಂಗ್ರೆಸ್ ೨೭ಮತ್ತು೨೮ ಅವಿರೋಧ ಆಯ್ಕೆಯಾಗಿತು. ೨೯ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಷ್ಠೆಯಾಗಿದ್ದರೆ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಿತು. ಇಂದು ಮತ ಏಣಿಕೆ ನಡೆದು ಫಲಿತಾಂಶ ಹೊರಬಿದಿದ್ದು ಕಾಂಗ್ರೆಸ್ ಪಕ್ಷ ೧೮ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಜೆಡಿಎಸ್ ಪಕ್ಷ ೧೧ರಲ್ಲಿ ಗೆಲುವು ಸಾಧಿಸಿದೆ.

snd
ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೧ ಕೆ. ಜಬೀನಾ ಬೇಗಂ, ೨ರಲ್ಲಿ ನಳಿನಿ ಚಂದ್ರಶೇಖರ್ ಗೌಡ ಮೇಟಿ, ೩ರಲ್ಲಿ ಸರಿತಾ ವೆಂಕಟೇಶ ಬಂಡಿ, ೬ರಲ್ಲಿ ಹುಸೇನ್ ಬೀ, ೮ರಲ್ಲಿ ಆಲಂಬಾಷ್, ೧೧ರಲ್ಲಿ ಹುಸೇನ್ ಖಾಜಾ ಹುಸೇನ್, ೧೨ರಲ್ಲಿ ಬಡಿ ಬೀ, ೧೩ರಲ್ಲಿ ನಾಗಮ್ಮ ಛತ್ರಪ್ಪ, ೧೪ರಲ್ಲಿ ಶರಣಪ್ಪ, ೧೫ರಲ್ಲಿ ಶಬ್ಬೀರ್ ಅಹ್ಮದ್, ೧೯ರಲ್ಲಿ ಹುಸೇನ್ ಬಾಷ್, ೨೦ರಲ್ಲಿ ಮುರ್ತುಜಾ, ೨೧ರಲ್ಲಿ ಮಂಜುಳಾ ಪ್ರಭುರಾಜ, ೨೨ಮುನಿರ ಪಾಷ್, ೨೩ರಲ್ಲಿ ಶೇಖ್ರಪ್ಪ ಗಿಣಿವಾರ, ೨೪ ಮಲ್ಲಿಕಾರ್ಜುನ ಪಾಟೀಲ್, ೨೫ರಲ್ಲಿ ಉಮಾ ಸುರೇಶ ಜಾಧವ್, ೩೦ರಲ್ಲಿ ಮಹೆಬೂಬು ಪಾಷ್ ಗೆಲ್ಲವು ಸಾಧಿಸಿದ್ದಾರೆ.
ಜೆಡಿಎಸ್ ಪಕ್ಷ ೪ರಲ್ಲಿ ಶಮಶಾದ ಬೇಗಂ, ೫ರಲ್ಲಿ ಹನುಮೇಶ ಕೆ. ಮರಿಯಪ್ಪ, ೭ರಲ್ಲಿ ವಿರೇಶ ಹಟ್ಟಿ, ೮ರಲ್ಲಿ ಕೆ. ಜಿಲಾನಿ ಪಾಷ್, ೧೦ರಲ್ಲಿ ಸಣ್ಣ ವೀರಭದ್ರಪ್ಪ, ೧೬ರಲ್ಲಿಒ ಚಂದ್ರಶೇಖರ್ ಮೈಲಾರ್, ೧೭ರಲ್ಲಿ ಡಿ. ಸತ್ಯನಾರಾಯಣ, ೧೮ರಲ್ಲಿ ಸೈದಾಬಿ, ೨೬ರಲ್ಲಿ ಹುಸೇನಮ್ಮ, ೨೭ರಲ್ಲಿ ಪ್ರಿಯಾಂಕ ನಾಯಕ, ೩೧ರಲ್ಲಿ ಆಯಿಶಾ ಬಾನು ಗೆಲವು ಸಾಧಿಸಿದ್ದಾರೆ ಎಂದು ಚುನಾವಣೆ ಅಧಿಕಾರಿ ಸಂತೋಷ ಕಾಮೇಗೌಡ ಪತ್ರಿಕೆ ತಿಳಿಸಿದ್ದಾರೆ.
ನಗರ ಸಭೆ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಕಾಂಗ್ರೆಸ್ ೨೦ ಸ್ಥಾನಗಳನ್ನು ಜೆಡಿಎಸ್ ೧೧ರಲ್ಲಿ ಜಯ ಸಾಧಿಸಿದ್ದು. ಮುಂದೆ ನಗರ ಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಗೆದ್ದ ಅಕಾಂಕ್ಷಿಗಳು ಆಯಾ ಆಯಾ ಪಕ್ಷದ ಮುಖಂಡರಲ್ಲಿ ಇಂತಹದೆ ಮೀಸಲಾತಿ ತರಬೇಕು ಎಂದು ಒತ್ತಡ ಹಾಕುತ್ತಿರುವುದು ಕಂಡುಬಂದಿದೆ.

snd-2

ನಗರ ಸಭೆ ಜೆಡಿಎಸ್ ಅಧಿಕಾರ

೨೦ರಲ್ಲಿ ಕಾಂಗ್ರೆಸ್ ಪಕ್ಷ ನಿಶ್ಚಳ ಬಹುಮತ ಪಡೆದು ನಗರ ಸಭೆ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದ್ದು ವಿಪರ್ಯಾಸವೆಂದರೆ ಎಸ್‌ಟಿ ಅಭ್ಯರ್ಥಿಗಳು ಗೆಲ್ಲದಿರುವುದರಿಂದ, ಸಚಿವ ವೆಂಕಟರಾವ್ ನಾಡಗೌಡ ಜೆಡಿಎಸ್ ಪಕ್ಷದಿಂದ ೨೯ನೇ ವಾಡಿನಿಂದ ಗೆದ್ದಿರುವ ಪ್ರಿಯಾಂಕ ನಾಯಕ ಪರಿಶಿಷ್ಟ ಪಗಂಡ ಏಕೈಕ ಅಭ್ಯರ್ಥಿಯಾಗಿದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿ ನಗರ ಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಮೀಸಲಾತಿ ತರಲು ಸಿದ್ದತೆ ನಡೆಸಿದ್ದಾರೆ ಎಂದು ಬಲ ಮೂಲಗಳಿಂದ ತಿಳಿದುಬಂದಿದೆ.
ಕಳೇದ ನಗರ ಸಭೆಯಲ್ಲಿ ಕೇವಲ ನಾಲ್ಕು ಸ್ಥಾನಪಡೆದಿದ್ದ ಜೆಡಿಎಸ್ ಸಚಿವ ವೆಂಕಟರಾವ್ ನಾಡಗೌಡರ ಪ್ರಭಾವ ಹಾಗು ಕಾರ್ಯಕರ್ತರ ಶ್ರಮದಿಂದ ನಾಲ್ಕು ಸ್ಥಾನವಿದದ್ದು ೧೧ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ನಗರ ಸಭೆಗೆ ಎಸ್‌ಟಿ ಮೀಸಲಾತಿ ತರುವ ಮೂಲಕ ನಗರ ಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಸಚಿವ ವೆಂಕಟರಾವ್ ನಾಡಗೌಡ ಭಗೀರಥ ಪ್ರಯತ್ನ ನಡೆಸಿದ್ದಾರೆ ಇದನ್ನು ತಪ್ಪಿಸಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಮಾಜಿ ಸಂಸದ ವಿರೂಪಾಕ್ಷಪ್ಪ ನಗರ ಸಭೆ ಕಾಂಗ್ರೆಸ್ ತೆಕ್ಕಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿದ್ದು ಯಾರು ಕೈ ಮೇಲಾಗುವುದು ಕಾದು ನೋಡಬೇಕು.

Leave a Comment