ನಗರ್‌ಕರ್ ಕಟ್ಟಿದ ಬಬ್ರೂ

ನಿಷ್ಕರ್ಷ, ಬೆಳದಿಂಗಳ ಬಾಲೆ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿ ಸ್ಯಾಂಡಲ್‌ವುಡ್‌ನಿಂದ ದೂರವಾಗಿದ್ದ ಸುಮನ್‌ನಗರ್‌ಕರ್  ವಿದೇಶದಲ್ಲಿದರೂ ಸಿನೆಮಾ ಮೇಲಿನ ವ್ಯಾಮೋಹ ಬಿಡದೇ ’ಬಬ್ರೂ ಎನ್ನುವ ಚಿತ್ರ ಮಾಡಿಕೊಂಡು ಬಂದಿದ್ದಾರೆ. ಬಬ್ರೂ ಸಿನಿಮಾಕ್ಕೆ ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ ಸಿನೆಮಾ ಈಗಾಗಲೇ ಪೂರ್ಣಗೊಂಡಿದ್ದು ಬಿಡುಗಡೆ ಮಾಡಲು  ಸುಮನ್‌ನಗರ್‌ಕರ್  ಸಿದ್ದತೆ ನಡೆಸಿದ್ದಾರೆ.

ಭಾರತೀಯರಾದ ಅರ್ಜುನ್  ಪ್ರೇಯಸಿಯನ್ನು ಭೇಟಿ ಮಾಡಲು ಅಮೇರಿಕಾಕ್ಕೆ  ಹೋಗುತ್ತಾನೆ  ಅಲ್ಲಿ ಈಗಾಗಲೇ ವಿವಾಹವಾಗಿ  ಗಂಡನಿಂದ ಕಿರುಕುಳ ಅನುಭವಿಸಿ  ಆತನಿಂದ ಮುಕ್ತಿ ಪಡೆಯಲು ಕಾಯುತ್ತಿದ್ದ ಮಹಿಳೆಯೊಬ್ಬರು ಪರಿಚಯವಾಗಿ ಬಬ್ರೂ ಎನ್ನುವ ಕಾರಿನಲ್ಲಿ ಕ್ಯಾಲಿಫೋರ್ನಿಯಾದಿಂದ ವ್ಯಾಂಕೋವರ್‌ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಮೆಕ್ಸಿಕೋದ ರೈತ ಸೇರಿಕೊಳ್ಳುತ್ತಾನೆ.

ಕಾಕತಾಳೀಯ ಎನ್ನುವಂತೆ ಈ ಮೂವರು ಪ್ರಯಾಣಿಸುತ್ತಿದ್ದ ಬಬ್ರೂ ಕಾರು  ಪೋಲೀಸ್, ದುರುಳರಿಗೂ  ಬೇಕಾಗಿರುತ್ತದೆ. ಇದರಿಂದ ಇಬ್ಬರಿಗೂ ತೊಂದರೆ ಆಗುತ್ತದೆಯೇ ಅವರು  ಗುರಿಯನ್ನು ತಲುಪುತ್ತಾರೋ  ಎಂಬುದರ ಬಗ್ಗೆ  ಚಿತ್ರ ಸಾಗಲಿದೆ ಎಂದು ಕಳೆದ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ಸುಮನ್‌ನಗರ್‌ಕರ್  ವಿವರ ನೀಡಿದರು . ಬಬ್ರೂಗೆ ಅಮೆರಿಕಾದ ಗ್ರಾಂಡ್ ಕ್ಯಾನ್ಯನ್, ಡೆತ್‌ವ್ಯಾಲಿ, ಜಿಯಾನ್, ಅವೆನ್ಯೂ ಆಫ್ ಜೈನ್ಸ್, ಮಾರ್ಗ ಮದ್ಯೆ ಬರುವ ಲ್ಯಾಂಡ್‌ಸ್ಕೋಪ್ ಸೇರಿ ಸುಂದರ ವಾತಾವರಣದಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಅಮೇರಿಕಾ ಚಿತ್ರಣ ಪ್ರೇಕ್ಷಕರಿಗೆ ದೋರೆಯಲಿದೆ.

ಅಮೇರಿಕಾದಲ್ಲಿ ನೆಲಿಸಿದ್ದರೂ  ಬಣ್ಣದ ಮೇಲಿನ ವ್ಯಾಮೋಹದಿಂದ ಪತಿ ಗುರುದೇವ್‌ನಾಗರಾಜ್ ಹಾಗೂ ಐದು ಜನರ ತಂಡವನ್ನು ಕಟ್ಟಿಕೊಂಡು ಪ್ರೊಡಕ್ಷನ್ ಮತ್ತು ಯುಗ ಕ್ರಿಯೆಶನ್ಸ್ ಹುಟ್ಟು ಹಾಕಿ  ಬಬ್ರೂ ಸಿನೆಮಾ ಮಾಡಿದ್ದೇನೆ ಎಂದರು ಸುಮನ್‌ನಗರ್‌ಕರ್  ನಿರ್ಮಾಣದಲ್ಲಿರುವ ಎಲ್ಲರೂ ಡಾ.ರಾಜ್‌ಕುಮಾರ್ ಅಭಿಮಾನಿಯಾಗಿದ್ದರಿಂದ ಬಬ್ರುವಾಹನ ಚಿತ್ರದ ಪ್ರೇರಣೆಯಿಂದ ಸಿನಿಮಾಕ್ಕೆ ಬಬ್ರೂ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಸುಮನ್‌ನಗರ್‌ಕರ್, ಮಾಹಿಹಿರೇಮಠ, ರೇ ತೋಸ್ತಾಡೊ, ಸನ್ನಿಮೋಜ, ಪ್ರಕೃತಿ ಕಶ್ಯಪ್  ನಟಿಸಿದ್ದಾರೆ.

Leave a Comment