ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು ಸಮಪರ್ಕ ವಿದ್ಯುತ್, ಕುಡಿವ ನೀರು ಪೂರೈಕೆಗೆ ಆಗ್ರಹ.

ಹೊಸಪೇಟೆ:ಆ,1- ನಗರದಲ್ಲಿ ಅಸಮರ್ಪಕ ವಿದ್ಯುತ್ ಕಡಿತ ಹಾಗೂ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿರುವುದನ್ನು ಖಂಡಿಸಿ ನಗರಸಭೆ ಸದಸ್ಯರು ಬುಧವಾರ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿಯಲ್ಲಿ ನಿಗದಿಯಾಗಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಪಾದಯಾತ್ರೆ ಮೂಲಕ ಜೆಸ್ಕಾಂ ಕಚೇರಿಗೆ ತೆರಳಿ ಧರಣಿ ಕೂಳಿತರು. ಕಳೆದ ಹಲವು ದಿನಗಳಿಂದ ನಗರದಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಜಲಾಶಯದಲ್ಲಿ ನೀರಿದ್ದರೂ ನಗರದಲ್ಲಿ ಮಾತ್ರ ವಿದ್ಯುತ್ ಇಲ್ಲದಂತಾಗಿದೆ. ಅಲ್ಲದೇ ಕುಡಿವ ನೀರು ಸಹ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಎಂಜೆ ನಗರ ಭೋವಿ ಕಾಲೊನಿಯ ಮನೆಗಳ ಮೇಲೆ 33ಕೆವಿ ವಿದ್ಯುತ್ ತಂತಿ ಹಾದುಹೋಗಿರುವುದರಿಂದ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆಯಲ್ಲಿ ನಿಗದಿಯಾಗಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಪೌರಾಯುಕ್ತ ರಮೇಶ್ ಮನವೊಳಿಸುವ ಪ್ರಯತ್ನಿಸಿದರು ಉಪಯೋಗವಾಗಲಿಲ್ಲ.

Leave a Comment