ನಗರಸಭೆ ಚುನಾವಣೆ: ಶೀಘ್ರ ಜಾದಳ ಆತ್ಮಾವಲೋಕನಾ ಸಭೆ

ರಾಯಚೂರು.ಸೆ.04- ನಗರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜಾದಳ ಪಕ್ಷ ತನ್ನ ಠೇವಣಿ ಕಳೆದುಕೊಂಡಿರುವ ಕುರಿತು ಶೀಘ್ರವೇ ಸೋಲಿನ ಪರಮಾರ್ಶೆ ನಡೆಸಲಾಗುತ್ತದೆ ಎಂದು ಜಾದಳ ಕಾರ್ಯಾಧ್ಯಕ್ಷ ಎನ್.ಶಿವಶಂಕರ್ ವಕೀಲರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆಯ 35 ವಾರ್ಡ್‌ಗಳ ಪೈಕಿ ಜಾದಳ ಕೇವಲ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದರಿಂದ ಆತ್ಮಾವಲೋಕನೆ ಮಾಡಿಕೊಳ್ಳಲಾಗುತ್ತದೆ. ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವೇನು ಎನ್ನುವುದನ್ನು ಹುಡುಕಲಾಗುತ್ತದೆ. ನಗರಸಭೆ ಚುನಾವಣೆಯಲ್ಲಿ ಜಾದಳವು ಕಳೆದ ಸಾಲಿಗಿಂತ ಈ ಬಾರಿ 6 ಸ್ಥಾನಗಳನ್ನು ಕಳೆದುಕೊಳ್ಳಲಾಗಿದೆ.
ವಾರ್ಡ್ 21, 5 ರಲ್ಲಿ ಜಾದಳದ ಮುಖಂಡರು ಕೊನೆ ಘಳಿಗೆಯಲ್ಲಿ ಬಿಜೆಪಿಯತ್ತ ವಾಲಿರುವುದರಿಂದ ಆ ಎರಡು ವಾರ್ಡ್‌ಗಳಲ್ಲಿ ಜಾದಳವು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ವಿಫಲರಾಗಿರುವುದರಿಂದ ಸೋಲುಂಟಾಗಿದೆ. ಕಾಂಗ್ರೆಸ್ ಪಕ್ಷ ಇಬ್ಬರು ಅಭ್ಯರ್ಥಿಗಳಿಗೆ ಬಿ.ಫಾರಂ ವಿತರಿಸಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಗೆ ಕಾರಣವಾಗಿತ್ತು. ಇದನ್ನು ನಾವು ಸಮರ್ಪಕವಾಗಿ ಸದುಪಯೊಗ ಪಡೆಸಿಕೊಂಡಿದ್ದರೆ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಶೀಘ್ರ ಆತ್ಮಾವಲೋಕನಾ ಸಭೆ ನಡೆಸಲಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆಗೆ ಇಂದಿನಿಂದಲೇ ಪಕ್ಷದ ಸಂಘಟನೆಯತ್ತ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದರು.
ವಿಶ್ವನಾಥ ಪಟ್ಟಿ ಮಾತನಾಡಿ, ವಾರ್ಡ್‌ 3 ರಲ್ಲಿ ಜಾದಳ ಅಭ್ಯರ್ಥಿಯಾಗಿ ಕಣಕ್ಕಿಳಿಯಲಾಗಿತ್ತು, ಆದರೆ, ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ತಮ್ಮಸೋಲಿಗೆ ಕಾರಣವಾಯಿತು. ವಾರ್ಡ್ 3 ರ ಮತದಾರರು 673 ಮತಗಳನ್ನು ನೀಡಿದ್ದರು. 50 ಮತಗಳಿಂದ ಪರಾಭವಗೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ವಾರ್ಡ್‌ನ ಮೂಲಭೂತ ಸೌಕರ್ಯ ಕಲ್ಪಿಸಲು ನಗರಸಭೆ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.  ಮಹೇಶ್ ಕುಮಾರ್, ಎ.ಎಲ್.ವೀರೇಶ್, ಬಸವರಾಜ, ರಾಜೇಶ್, ವಿಷ್ಣು ಉಪಸ್ಥಿತರಿದ್ದರು.

Leave a Comment