ನಗರಸಭೆ ಅಧ್ಯಕ್ಷ ಸ್ಥಾನ : ಮುಸ್ಲೀಂರಿಗೆ ನೀಡಿ

ರಾಯಚೂರು.ಸೆ.11- ನಗರಸಭೆ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೂ ಮುಸ್ಲೀಂ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡದೆ ವಂಚಿಸಲಾಗಿದ್ದು, ಪ್ರಸ್ತುತ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು.
ಸ್ಥಳೀಯ ತಾಜ್ ಫಂಕ್ಷನ್ ಹಾಲ್‌ನಲ್ಲಿ ಮುಸ್ಲೀಂ ಯುನೈಟೆಡ್ ಫ್ರೇಂಟ್ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡುತ್ತಾ, ನಗರದಲ್ಲಿ 65 ಸಾವಿರ ಮುಸ್ಲೀಂ ಬಾಂಧವರಿದ್ದು, ಈ ಪೈಕಿ 48 ಸಾವಿರ ಮತದಾರರಿದ್ದಾರೆ. ಪ್ರಸ್ತುತ 6 ಜನರು ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿ 6-9 ಜನ ಮುಸ್ಲೀಂ ಸಮುದಾಯದವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆದರೆ, ಭಾರತಕ್ಕೆ ಸ್ವತಂತ್ರ ಬಂದಾಗನಿಂದ ಇದುವರೆಗೂ ಮುಸ್ಲೀಂ ಸಮುದಾಯದ ಯಾವೊಬ್ಬ ಸದಸ್ಯರು ನಗರಸಭೆಯ ಅಧಿಕಾರಿ ಚುಕ್ಕಾಣಿ ಹಿಡಿದಿಲ್ಲ. ಜನಸಂಖ್ಯೆಯಲ್ಲಿ ಮುಸ್ಲೀಂರು ಹೆಚ್ಚಿದ್ದರೂ ಸಹ ಅಧಿಕಾರದಿಂದ ವಂಚಿತರಾಗುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಮುಖಂಡರು ಮುಸ್ಲೀಂ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಸಿರಾಜ್ ಅಹ್ಮದ್ ಜಾಫ್ರೀ ಮಾತನಾಡಿ, ಮುಸ್ಲೀಂರು ಕೇವಲ ಓಟ್ ಬ್ಯಾಂಕ್‌ಗೆ ಮಾತ್ರ ಸೀಮಿತರಾಗಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಿ ಅಧ್ಯಕ್ಷ ಸ್ಥಾನ ನೀಡುವ ಪಕ್ಷಕ್ಕೆ ಬೆಂಬಲಿಸಬೇಕೆಂದು ತಿಳಿಸಿದರು.
ಡಾ.ರಿಯಾಜ್ ಮಾತನಾಡಿ, ರಾಜಕೀಯ ಅಧಿಕಾರ ಪಡೆಯಲು ಹೋರಾಟ ಹಮ್ಮಿಕೊಳ್ಳುವುದು ಅತ್ಯವಶ್ಯಕವೆಂದು ತಿಳಿಸಿದರು. ಡಾ.ಜಾಕೀರ್, ಸೈಯದ್ ಅಶ್ರಫ್, ಸೈಯದ್ ತಾಜುದ್ದೀನ್ ಖಾದ್ರಿ, ನೂರ್ ಎ ದರಿಯಾ ಸಾಹೇಬ್, ಸೈಯದ್ ಚಾಂದ್ ಪೀರ್ ಸಾಹೇಬ್, ಸೈಯದ್ ಇನಾಯಿತ್ ಉಲ್ ಸಾಹೇಬ್, ಸೈಯದ್ ಅಫ್ಸರ್ ಹುಸೇನ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment