ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಟಾಪಟಿ

“ಕಮಲ” ಕ್ಕೊ ಇಲ್ಲ “ಕೈ” ಗೊ ಇಲ್ಲ
ಚಾಮರಾಜನಗರ ಸೆ.14- ಚಾಮರಾಜನಗರದ ನಗರ ಸಭೆ ಚುನಾವಣೆ ನಡೆದು ಮುಗಿದಾದರು ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.
ಇತ್ತಿಗೆ ನಡೆದ ನಗರಸಭಾ ಚುನಾವಣೆಯಲ್ಲಿ ಬಿ.ಜೆ.ಪಿ 15 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 8 ಸ್ಥಾನ ಎಸ್.ಟಿ.ಪಿ.ಐ 6 ಹಾಗೂ ಬಿ.ಎಸ್.ಪಿ 1.ಪಕ್ಷೇತರ 1 ಸ್ಥಾನಗಳನ್ನು ಪಡೆದು ನಗರಸಭೆಗೆ ಆಯ್ಕೆಯಾಗಿದ್ದಾರೆ ಇದರಲ್ಲಿ ಅಧ್ಯಕ್ಷರ ಸ್ಥಾನ ಪರಿಶಿಷ್ಠ ಜನಾಂಕ್ಕೆ ಮಿಸಾಲಾಗಿ ಹಾಗೂ ಉಪಾಧ್ಯಕ್ಷರ ಸ್ಥಾನ ಜನರಲ್ ಗೆ ದೊರೆತಿದೆ ಇದರಂತೆ ಮುಂದೆ ನಡೆಯುವ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ನಗರಸಭೆ ಸಜ್ಜಾಗುತ್ತಿದೆ.
ಬಿಜೆಪಿ 15 ಸ್ಥಾನಗಳನ್ನು ಪಡೆದು ಅಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ನೀಡಲು ಸಿದ್ದವಿದೆ ಅದರೆ ಬಿಜೆಪಿಗೆ ಇನ್ನು 2 ಸ್ಥಾನಗಳು ಬೇಕಾಗಿದೆ ಈ ಎರಡು ಸ್ಥಾನಗಳನ್ನು ಯಾವರೀತಿಯಲ್ಲಿ ಗಳಿಸಲಿದೆ ಎಂದು ಕಾದು ನೋಡಬೇಕಿದೆ.
ಕೆಲವು ಹಿರಿಯ ನಗರಸಭೆಯ ಸದಸ್ಯರು ಬಿಜೆಪಿಯ ಜೊತೆ “ಕೈ” ಜೊಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಅಧ್ಯಕ್ಷ ಗರಿ ಹಿರಿಯ ಸದಸ್ಯರು ಹೇಳಿದಂತೆ ನಡೆದರೆ ಉಪಾಧ್ಯಕ್ಷರ ಸ್ಥಾನ ಬಿ.ಜೆಪಿ ಒಲಿಯುವುದು ಖಂಡಿತ.

Leave a Comment