ನಗರದಲ್ಲಿ ಶಾಸಕರಿಂದ ಬಿಜೆಪಿ ಪರ ಬಿರುಸಿನ ಪ್ರಚಾರ

ಬಳ್ಳಾರಿ, ಏ.19: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಒಂದು ಕಡೆ ಬಿಸಿಲಿನ ತಾಪ ಹೆಚ್ಚುತ್ತಿರುವಂತೆ ಮತ್ತೊಂದು ಕಡೆ ಅಭ್ಯರ್ಥಿಗಳ ಪರ ಮತಯಾಚನೆಯು ಮುಖಂಡರ ಪ್ರಚಾರದ ಭರಾಟೆಯೂ ಹೆಚ್ಚ ತೊಡಗಿದೆ.

ಇಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಬೆಳಿಗ್ಗೆಯೇ ಒಂದಿಷ್ಟು ತಂಪು ಸಮಯದಿಂದಲೇ ನಗರದ 13 ಮತ್ತು 14ನೇ ವಾರ್ಡುಗಳಲ್ಲಿ ಮನೆ ಮನೆಗೆ ತಮ್ಮ ಕಾರ್ಯಕರ್ತರೊಡನೆ ತೆರಳಿ ಕರಪತ್ರ ನೀಡಿ ಬಿಜೆಪಿ ಅಭ್ಯರ್ಥಿಗೆ ಮತನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿದ್ದಾರೆ. ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಪ್ರಧಾನಿಯಾರಗಬೇಕು ಎಂಬ ಕಚ್ಚಾಟವೇ ನಡೆಯಲಿದೆ. ಅದಕ್ಕಾಗಿ ದೇಶವನ್ನು ಮುನ್ನಡಿಸುವ ಸಮರ್ಥ ನಾಯಕ ಮೋದಿಯಾಗಿ ಬಿಜೆಪಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಶ್ರೀನಿವಾಸ್ ಮೋತ್ಕರ್, ವೀರಶೇಖರರೆಡ್ಡಿ, ಕೃಷ್ಣಾರೆಡ್ಡಿ, ಗಾಜುಲ ಸೀನಾ, ಇಬ್ರಾಹಿಂ, ಕೊಳಗಲ್ಲು ಪ್ರಸಾದರೆಡ್ಡಿ, ಬೆಲ್ಲಂ ವಾಸುರೆಡ್ಡಿ, ಗುಜರಿ ಅಜೀಜ್, ಆನಂದ್ ಕುಮಾರ್, ರವಿ, ವೀರೇಶ್ ರಂಗಸ್ವಾಮಿ, ಹುಂಡೇಕರ್ ರಾಜೇಶ್, ತಲಾರಿರಾಮ್, ವೆಂಕಟೇಶ್, ಗೋಪಿ ಚಂದ್ರ, ಹನುಮೇಶ್, ಸಿದ್ದನಗೌಡ, ಉಪ್ಪಾರ ಕೃಷ್ಣ, ರವಿತೇಜ, ಬಸವರಾಜ, ಮೊದಲಾದವರು ಇದ್ದರು.

Leave a Comment