ನಗರದಲ್ಲಿ ವೃತ್ತಿ ಜೀವನ ಅಭಿವೃದ್ಧಿ ಕೇಂದ್ರ ಸ್ಥಾಪನೆ

ಬೆಂಗಳೂರು, ಆ. ೨೩- ರಾಜ್ಯದಲ್ಲಿ ಮೊದಲ ಸಮುದಾಯ ವೃತ್ತಿ ಜೀವನ ಅಭಿವೃದ್ಧಿ ಕೇಂದ್ರವನ್ನು (ಸಿಡಿಸಿ) ಸ್ಥಾಪಿಸಲು ನಾಸ್‌ಕಾಮ್ ಫೌಂಡೇಷನ್ ನೊಂದಿಗೆ ನಗರದ ಟೆಸ್ಕೋ ಸಂಸ್ಥೆ ಪಾಲುಗಾರಿಕೆ ಮಾಡಿಕೊಂಡಿದೆ.
ವೈಟ್ ಫೀಲ್ಡ್ ಅಂಬೇಡ್ಕರ್ ನಗರದಲ್ಲಿ ಇರುವ ಸಿಡಿಸಿ ಕೇಂದ್ರ ಪ್ರಸಕ್ತ ವರ್ಷದ ಅಕ್ಟೋಬರ್‌ನಿಂದ ಫಲಾನುಭವಿಗಳ ಸೇರ್ಪಡೆ ಆರಂಭಗೊಳ್ಳಲಿದೆ. ಸಿಡಿಸಿ ಕೇಂದ್ರ ರಾಷ್ಟ್ರೀಯ ಬಿಜಿನೆಸ್ ಡಿಜಿಟಲ್ ಸಾಕ್ಷರತೆಯ ಅಭಿಯಾನದ ಪಠ್ಯ ಕ್ರಮಕ್ಕೆ ಅನುಗುಣವಾಗಿ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮಕ್ಕೆ ಸಿಡಿಸಿ ಆತಿಥ್ಯ ವಹಿಸಲಿದೆ.
ನಾಸ್‌ಕಾಮ್ ಫೌಂಡೇಷನ್ ಮೂರು ಹಂತದ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಇದು ಆರಂಭದ ಹಂತದಲ್ಲಿ 700 ಉದ್ಯೋಗ ಸೃಷ್ಠಿಸುವ ಗುರಿ ಹೊಂದಿದೆ. ಎಂದು ಟೆಸ್ಕೋ ಬಿಜಿನೆಸ್ ಸರ್ವೀಸಸ್ ಮತ್ತು ಟೆಸ್ಕೋ ಬೆಂಗಳೂರು ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಮಿತ್ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ಷಿಕ 1 ಲಕ್ಷಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಂದ ಬಂದ ಮತ್ತು 12ನೇ ಅಥವಾ ಪಿಯುಸಿ ತೇರ್ಗಡೆಯಾಗಿರುವ ಯುವಜನರು ಈ ಕಾರ್ಯಕ್ರಮಕ್ಕೆ ಸೇರ್ಪಡೆಗೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಈ ಕೋರ್ಸ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಫಲಾನುಭವಿಗಳು ಉದ್ಯಮ ಮಾನ್ಯತೆ ಹೊಂದಿರುವ ಪ್ರಮಾಣ ಪತ್ರ ಪಡೆಯುವುದರ ಜೊತೆಗೆ ಉದ್ಯೋಗ ಮೇಳದಲ್ಲೂ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.

Leave a Comment