ನಗರದಲ್ಲಿ ಭಾರತದ ಅತಿ ದೊಡ್ಡ ತೇಲುವ ದ್ವೀಪ

ಬೆಂಗಳೂರು, ನ.೩- ಬೆಂಗಳೂರಿನಲ್ಲಿ ಭಾತರದ ದೊಡ್ಡ ತೇಲುವ ದ್ವೀಪವಿದೆ. ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೊಡಿ ಕರೆ ಈಗ ದೇಶದ ದೊಡ್ಡ ತೇಲುವ ದ್ವೀಪ ಎಂದು ಲಿಮ್ಕಾ ಬುಕ್‌ನಲ್ಲಿ ದಾಖಲಾಗಿದೆ. ೧೨.೦೦೦ ಸ್ಕ್ವೇರ್ ಫೂಟ್ ವೀಸ್ತಿರ್ಣದ ಕೆರೆಯಲ್ಲಿ ಸಸ್ಯವರ್ಗವನ್ನು ಹೊಂದಿದೆ. ತೇಲುವ ಸಸ್ಯವರ್ಗ ಬೆಳೆಯಲು ಸಹಕಾರಿಯಾಗುವ ಕ್ರಾಫ್ಟ್‌ಗಳನ್ನು ನಿರ್ಮಿಸಿ ಕೆರೆಯ ನೀರನ್ನು ಸ್ವಚ್ಛಗೊಳಿಸಲು ಮರು ಬಳಕೆಯ ಪಿವಿಸಿ ಪೈಪ್‌ಗಳಿಂದ ನೀರ್ಮಿಸಲಾಗಿದೆ.

ಹೆಚ್ಚಿನ ಪೋಷಕಾಂಶಗಳನ್ನು ತಗೆದುಹಾಕುವುದರ ಮೂಲಕ ಕೆರಯ ನೀರಿನ ಗುಣಮಟ್ಟವನ್ನು ೬.೫ ಪಿ.ಎಚ್ ನಿಂದ ೮.೫ ಪಿ.ಎಚ್ ರಷ್ಟು ಇದ್ದು ಸಹಜ ಸ್ಥಿಯಲ್ಲಿದೆ.

ರಾಫ್ಟ್‌ಗಳ ಮೇಲೆ ಬೆಳೆದ ಸಸ್ಯಗಳ ಬೇರುಗಳಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಇದ್ದು, ಅವು ಕೆರೆಯಲ್ಲಿ ಹರೆಯುವ ತ್ಯಾಜ್ಯದ ಮಾಲಿನ್ಯವನ್ನು ತಗ್ಗಿಸುತ್ತವೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ೩೫ ಎಕರೆಯನ್ನು ೨೦೧೬ರ ಅಗಸ್ಟ್‌ನಲ್ಲಿ ಜೈವಿಕ ಬಯೋಕಾನ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಯಾದ ಸಿಂಜೆನ್ ಇಂಟರ್‌ನ್ಯಾಷನಲ್ ಸಂಸ್ಥೆಯು ನಗರ ಸಾರ್ವಜನಿಕ ಜವಾಬ್ದಾರಿ ಕಾರ್ಯಕ್ರಮದ ಅಡಿಯಲ್ಲಿ ಪುನರುಜ್ಜೀವನ ಕಾರ್ಯವನ್ನು ಕೈಗೊಂಡಿತು. ೧.೫ ಕಿ.ಮೀ. ನ ನಾಲೆ ಕಟ್ಟಿಸಲಾಗಿದ್ದು, ವಸತಿ ಪ್ರದೇಶಗಳಿಂದ ಬರುವ ನೀರಿಗಾಗಿ ೫ ಚರಂಡಿಗಳನ್ನು ನಿರ್ಮಿಸಲಾಗಿದೆ.

೨೦೧೭ರಲ್ಲಿ ಶಿಕಾರಿಪಾಲಿಯಾ, ತಿರುವಲುಯಾ, ವೀರಸಂದ್ರ ಕರೆಗಳ ಪುನರುಜ್ಜೀವನನಕ್ಕೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ೧.೫ ಕೀ.ಮೀ. ಕರೆಯ

ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ನಿವೃತ್ತ ಕಮಾಡಂರ್ ಜಿ.ಬಿ ಅರ್ಥಿ ಅವರು ಇನ್ನಷ್ಟು ಕರೆಗಳನ್ನು ದತ್ತು ಪಡೆದು ಪುನರುಜ್ಜೀವನಗೊಳಿಸಲಾಗುವುದು ಎಂದರು. ಬಯೋಕಾನ್ ಇಂಡಿಯಾ ಸಂಸ್ಥೆ ಕಾಮಸಂದ್ರ ಹಾಗೂ ದೊಡ್ಡಸಂದ್ರ ಕರೆಗಳ ಪುನಃಚೇತನದ ಕಾರ್ಯ ಕೈಗೊಂಡಿದ್ದು, ಕಮ್ಮಸಂದ್ರ ಕರೆಯನ್ನು ದೊಡ್ಡದಾಗಿ ಅಭಿವೃದ್ಧಿ ಪಡೆಸುವುದು ನಮ್ಮ ಗುರಿಯಾಗಿದ್ದು, ೧೯೬೦ರಲ್ಲಿ ೨೫೦ ಕರೆಗಳಿದ್ದು, ಈಗ ನಗರದಲ್ಲಿ ೩೪ ಕರೆಗಳಿವೆ. ಕರೆಗಳನ್ನು ಪುನಚೇತನಗೊಳಿಸಲು ಸರ್ಕಾರ ಖಾತ್ರಿ ಪಡಿಸಬೇಕು ಎಂದು ವ್ಯವಸ್ಥಾಪಕ ಸಹ ಸಂಸ್ಥಾಪಕ ಕಿರಣ್ ಮಜುಮ್ದರ್ ಶಾ ಹೇಳಿದ್ದಾರೆ.

Leave a Comment