ನಗರದಲ್ಲಿ ಫೆ.15 ರಿಂದ 3 ದಿನ ಶಸ್ತ್ರ ಚಿಕಿತ್ಸಕರ ರಾಜ್ಯ ಸಮ್ಮೇಳನ

• ಸಮ್ಮೇಳನದ ಮುಖ್ಯಾಂಶಗಳು
• ಬಳ್ಳಾರಿಯಲ್ಲಿ 3ನೇ ಬಾರಿಗೆ
• ರೋಬೋಟಿಕ್ ಸರ್ಜರಿ ಕುರಿತು ಉಪನ್ಯಾಸ,
• ಮುಖ್ಯ ಕಾಲೇಜಿನ 81 ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು
• ಪರಿಸರ ಸ್ನೇಹಿ, ಪ್ಲಾಸ್ಟಿಕ್ ಮುಕ್ತ
• 380 ವಿಷಯಗಳ ಮಂಡನೆ
• 25 ತಜ್ಞರಿಂದ ಉಪನ್ಯಾಸ
• ಶಸ್ತ್ರ ಚಿಕಿತ್ಸಕರ ಸಂಘದ ನೂತನ ಆಪ್ ರಚನೆ
• ಮಲ್ಲಿಗೆ ಹೂ ಗಿಡಗಳ ಕೊಡುಗೆ
ಬಳ್ಳಾರಿ,ಫೆ.11: ನಗರದ ವಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಫೆ.15 ರಿಂದ ಮೂರು ದಿನಗಳ ಕಾಲ ಭಾರತೀಯ ಶಸ್ತ್ರ ಚಿಕಿತ್ಸಕರು ಸಂಘದ ರಾಜ್ಯ ಮಟ್ಟದ 37ನೇ ಸಮ್ಮೇಳನ ಹಮ್ಮಿಕೊಂಡಿದೆಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಂ. ಶಿವಪ್ರಸಾದ್ ಹೇಳಿದ್ದಾರೆ.

ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ವಿದ್ಯಾಧರ ಕಿನ್ನಾಳ, ಡಾ.ಅರುಣಾ, ಡಾ.ಖಾಲಿದ್ ಮುಬಿನ್, ಡಾ.ಕಾಸಾ ಸೋಮಶೇಖರ್, ಡಾ.ಸಂಜೀವ ಜೋಷಿ, ಪ್ರಭು ಹುಬ್ಬಳ್ಳಿ ಅವರೊಂದಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದರು.

ವಿಮ್ಸ್ ಆಸ್ಪತ್ರೆಯಲ್ಲಿ 1980ರಿಂದ ಶಸ್ತ್ರ ಚಿಕಿತ್ಸೆ ವಿಭಾಗ ಆರಂಭಗೊಂಡಿದ್ದು ಇಲ್ಲಿವರೆಗೆ 190 ಜನರ ಸರ್ಜನ್‍ಗಳಾಗಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ಶಾಸ್ತ್ರ ಚಿಕಿತ್ಸೆಯಲ್ಲಿ ಹೊಸ ಹೊಸ ವಿಧಾನಗಳು ಬಂದಿದ್ದು ಅವುಗಳನ್ನು ಮನವರಿಕೆ ಮಾಡಲು ಇಂತಹ ಸಮ್ಮೇಳನ ಹಮ್ಮಿಕೊಳ್ಳುತ್ತ ಬಂದಿದೆ. ಈ ಹಿಂದೆ ಬಳ್ಳಾರಿಯಲ್ಲಿ 1999 ಮತ್ತು 2006ರಲ್ಲಿ ಇಂತಹ ಸಮ್ಮೇಳನ ನಡೆಸಿತ್ತು ಇದು ಮೂರನೇಯದಾಗಿದೆ.

ರಾಜ್ಯದ ವಿವಿಧೆಡೆಯಿಂದ ಒಂದು ಸಾವಿರಕ್ಕಿಂತ ಹೆಚ್ಚು ವೈದ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
380 ಜನ ಶಸ್ತ್ರ ಚಿಕಿತ್ಸಕರು ತಮ್ಮ ಸಂಶೋಧನ ಪ್ರಬಂಧಗಳನ್ನ ಮಂಡಿಸಲಿದ್ದಾರೆ.

ವಿಶೇಷ ಉಪನ್ಯಾಸ:
ರಾಜ್ಯದವರೂ ಸೇರಿದಂತೆ ಬಾಂಬೆ, ಹೈದ್ರಾಬಾದ್ ಮತ್ತು ವಿದೇಶಗಳಲ್ಲಿನ ತಜ್ಞ 75 ವೈದ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ವಿಶೇಷ ಎಂದರೆ, ವಿಮ್ಸ್ ಕಾಲೇಜಿನಲ್ಲಿಯೇ ಅಭ್ಯಾಸ ಮಾಡಿ ಯುಎಸ್‍ಎನಲ್ಲಿರುವ ಡಾ.ರಾಕೇಶ್ ಹೆಗಡೆ ಅವರು ರೋಬೋಟಿಕ್ ಕೊಲೋನಿಕ್ ಸರ್ಜರಿ ಬಗ್ಗೆ ಯು.ಕೆ.ದಲ್ಲಿರುವ ಡಾ. ಜಯ ಪ್ರಕಾಶ್ ಪತ್ತಾರ್ ಅವರು ಎಥಿಕ್ಸ್ ಆಫ್ ಸರ್ಜರಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನಕ್ಕೆ ಇದೇ ಕಾಲೇಜಿನಲ್ಲಿ ಕಲಿತ 81 ಜನ ಶಸ್ತ್ರ ಚಿಕಿತ್ಸಕರು ಪಾಲ್ಗೊಳ್ಳಲಿದ್ದಾರೆ.

ಪರಿಸರ ಸ್ನೇಹಿ:
ಸಮ್ಮೇಳವನ್ನು ಪರಿಸರ ಸ್ನೇಹಿಯಾಗಿ ಹಮ್ಮಿಕೊಳ್ಳುತ್ತಿದ್ದು, ಪ್ರಬಂಧಗಳ ಮಂಡನೆಯ ವಿಷಯ ಪ್ರಕಟಕ್ಕೆ ನೂತನ ಆ್ಯಪ್ ಕೆಎಸ್‍ಸಿ-ಎಎಸ್‍ಐ ರಚಿಸಿದೆ. ಪ್ಲಾಸ್ಟಿಕ್ ಬ್ಯಾಗ್ ಬ್ಯಾನರ್, ಫ್ಲೆಕ್ಸ್ ಬಳಕೆ ಕಡಿಮೆ ಮಾಡಿದ್ದು, ಬರುವ ಗಣ್ಯರು ವೈದ್ಯರುಗಳಿಗೆ ಹಡಗಲಿಯ ಮಲ್ಲಿಗೆ ಹೂವಿನ ಗಿಡಗಳನ್ನು ನಾರಿನ ಬ್ಯಾಗಿನಲ್ಲಿಟ್ಟು ನೀಡಲಿದೆ.
ಫೆ.15 ರಂದು ಬೆಳಿಗ್ಗೆ 8.45 ಕ್ಕೆ ಉಪನ್ಯಾಸಗಳು ಆರಂಭಗೊಳ್ಳಲಿವೆ. ಅಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಉದ್ಘಾಟಿಸಲಿದ್ದಾರೆ.

ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ದಯಾನಂದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಜೆಎಸಡಬ್ಲ್ಯುನ ವಿಜಯನಗರ ವಕ್ರ್ಸ್‍ನ ಅಧ್ಯಕ್ಷ ಪಿ.ರಾಜಶೇಖರ, ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಡಾ. ಅರವಿಂದ ಕುಮಾರ, ವಿಮ್ಸ್ ನಿರ್ದೇಶಕ ಡಾ. ಕೃಷ್ಣಸ್ವಾಮಿ ಆಗಮಿಸಲಿದ್ದಾರೆ.

Leave a Comment