ನಗರದಲ್ಲಿ ದಿಡೀರ್ ಮಳೆ ಹಲವೆಡೆ ಧರೆಗುರುಳಿದ ಮರಗಳು

 

ಬೆಂಗಳೂರು ಮೇ 24- ಇಂದು ಮಧ್ಯಾಹ್ನ ದಿಡೀರನೆ ಗಾಳಿ ಸಹಿತ ಸುರಿದ ಮಳೆಗೆ ಹಲವು ಕಡೆ ಮರಗಳು ಧರೆಗುರುಳಿ ಬಿದ್ದಿದ್ದರೂ ಮಾಡಿದರೂ ಯಾವುದೇ ಅಪಾಯ ವುಂಟಾಗಿಲ್ಲ.ನಗರದ ಮಲ್ಲೇಶ್ವರದ ಸಂಪಿಗೆ 1 ನೆ ಅಡ್ಡ ರಸ್ತೆಯಲ್ಲಿ ಯಲ್ಲಿ ಮರದ ಕೊಂಬೆ ನೆಲಕಚ್ಚಿದೆ
ಕೆಆರ್ ಸರ್ಕಲ್ ಬಳಿ ಅಂಡರ್ ಪಾಸ್ ನಲ್ಲಿ ನೀರು ನುಗ್ಗಿದ್ದು ಪೊಲೀಸರೂ ಯಾರು ಅಟ್ಟ ಕಡೆ ಹೋಗದಂತೆ ಬ್ಯಾರಿಕೇಡ್ ಗಳನ್ನು ಇಟ್ಟು ಬಂದ್ ಮಾಡಿದ್ದಾರೆ.
ಜಯನಗರ ಬಿಟಿಎಂ ಲೇ ಔಟ್ ಸಾರಕ್ಕಿ ಕೋರಮಂಗಲ, ಬಸವನಗುಡಿ ವಿಜಯ ನಗರ ರಾಜಾಜಿ ನಗರ ಗಳಲ್ಲಿ ಸೇರಿದಂತೆ ಹಲವೆಡೆ ಮರಗಳು ಉರುಳಿಬಿದ್ದಿವೆ
ಕೆ ಆರ್ ಮಾರು ಕಟ್ಟೆ ಬಳಿ ಹೆಚ್ಚು ಮಳೆ ಸುರಿದ ಪರಿಣಾಮ ರಸ್ತೆಯೆಲ್ಲ ನೀರಿನಿಂದ ಆವೃತ ವಾಗಿದೆ
ಭಾನುವಾರ ಲಾಕ್ ಡೌನ್ ಇದ್ದುದರಿಂದ ಜನರು ಮನೆಯಿಂದ ಹೊರಬರದೆ ಇದ್ದುದರಿಂದ ಮಳೆಯಿಂದ ತೊಂದರೆಗೆಒಳಗಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.

ನಗರದಲ್ಲಿ ಸುರಿದ ಮಳೆ ಯಿಂದಾಗಿ ತಂಪು ವಾತಾವರಣ ನಿರ್ಮಾಣವಾಗಿದೆ

ನಗರದ ಕೆಲ ರಸ್ತೆಗಳಲ್ಲಿ ನೀರು ನಿಂತಿದ್ದನ್ನು ಬಿಟ್ಟರೆ ಮಳೆಯಿಂದ ಯಾವುದೇ ಅಪಾಯ ವುಂಟಾಗಿಲ್ಲ.

ಮದ್ಯಾಹ್ನ 3 30 ರ ಸುಮಾರಿಗೆ ಸುಮಾರಿಗೆ ಭಾರೀ ಗಾಳಿ ಬೀಸಲುಆರಂಭವಾಗಿತ್ತು.ನಿದಾನವಾಗಿ ಸೂರ್ಯ ಕೂಡಾ ಮರೆಯಾಗಿದ್ದು ಸಂಜೆಯ ವಾತಾವರಣ ಕಂಡು ಬಂದಿತ್ತು .
ಇದೇ ವೇಳೆ ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಪ್ರಾರಂಭವಾಗಿತ್ತು. ಕೆಲವಡೆ ಗುಡುಗು ಸಹಿತ ಮಳೆ ಕಾಣಿಸಿಕೊಂಡಿತ್ತು.

Share

Leave a Comment