ನಗರದಲ್ಲಿ ತ್ರಿಬಲ್ ರೈಡಿಂಗ್ ಹಾವಳಿ-ಉಲ್ಲಂಘನೆ

ಪ್ರತಿನಿತ್ಯ 200 ಪ್ರಕರಣಗಳು ದಾಖಲು
(ರಾಚಯ್ಯ ಸ್ವಾಮಿ ಮಾಚನೂರು)
ರಾಯಚೂರು.ಜ.28- ರಸ್ತೆ ಸುರಕ್ಷತೆಗೆ ರಾಜ್ಯ ಸರಕಾರ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡರು ನಗರದಲ್ಲಿ ತ್ರಿಬಲ್ ರೈಡಿಂಗ್ ಹಾವಳಿ ಹೆಚ್ಚಾಗಿದ್ದು, ಪಾದಚಾರಿಗಳು ತಮ್ಮ ಪ್ರಾಣವನ್ನು ಕೈಯಲ್ಲಿ ಇಡಿದುಕೊಂಡು ಸಂಚಾರಿಸುವ ಪರಿಸ್ಥಿತಿ ಒದಗಿದೆ.
ಜಿಲ್ಲೆಯಲ್ಲಿ ಪೋಲಿಸ್ ಇಲಾಖೆಯು ರಸ್ತೆ ಸುರಕ್ಷತೆಗೆ ಹಲವಾರು ಜಾಗೃತಿ ಜಾಥ, ಬಯಲು ನಾಟಕ ಬೈಕ್‌ಸವಾರರ ಮನವರಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರು ಇದಕ್ಕೆ ಕಿವಿಗೊಡದೆ ಮನಬಂದಂತೆ ಸಂಚಾರ ಮಾಡಿಕೊಂಡು ಹೋಗುತ್ತಿದ್ದಾರೆ. ನಗರದಲ್ಲಿ ಪ್ರತಿನಿತ್ಯ ಪೋಲಿಸ್ ಇಲಾಖೆಯೂ ತ್ರಿಬಲ್ ರೈಡಿಂಗ್ ಮಾಡುತ್ತಿರುವವರನ್ನು ಹಿಡಿದು ಪ್ರಕರಣ ದಾಖಲಿಸಿ 1000 ರೂ. ದಂಡವನ್ನು ವಿಧಿಸಲಾಗುತ್ತದೆ.
ಆದರು ತ್ರಿಬಲ್ ರೈಡಿಂಗ್ ಹೆಚ್ಚಾಗುತ್ತಿದ್ದಾರೆ ಹೊರೆತು ಕಡಿಮೆಯಾಗುತ್ತಿಲ್ಲ. ಪ್ರತಿನಿತ್ಯ ಪೋಲಿಸ್‌ರು ತ್ರಿಬಲ್ ರೈಡಿಂಗ್, ಮೊಬೈಲ್ ಬಳಕೆ, ಹೆಲ್ಮೆಂಟ್ ಧರಿಸದೆ ಸಂಚಾರ ಮಾಡುತ್ತಿರುವವರನ್ನು ಸುಮಾರು 200 ಕ್ಕೂ ಹೆಚ್ಚಿ ವಾಹನಗಳನ್ನು ಹಿಡಿಯುತ್ತಿದ್ದಾರೆ.
ಶಾಲಾ ಕಾಲೇಜು, ಸಂಘ-ಸಂಸ್ಥೆಗಳ ಜೊತೆಗೂಡಿ ಸವಾರರರಿಗೆ ತ್ರಿಬಲ್ ರೈಡಿಂಗ್ ಮಾಡಿದರೆ ಅಪಘಾತ ಸಂಭವಿಸಿ ಏನೆಲ್ಲ ಕಾರಣಕ್ಕೆ ಗುರಿಯಾಗುತ್ತದೆ ಎಂಬುದನ್ನು ತಿಳಿಸಲು ಹಲವಾರು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಆದರೆ ಸವಾರರು ಕಿಂಚ್ಚಿತ್ತು ಬೆಲೆ ಕೊಡದೆ ತಮ್ಮ ಪಾಡಿಗೆ ತೆರಳುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಅಧಿಕಾರಿ ಅಮರಪ್ಪ ಶಿವಬಲಿ ಅವರು ಸಂಜೆವಾಣಿಯೊಂದಿಗೆ ಮಾತನಾಡುತ್ತಾ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಹಲವಾರು ಸಂಘ-ಸಂಸ್ಥೆಗಳು ಶಾಲಾ, ಕಾಲೇಜು ವಿದ್ಯಾರ್ಥಿಗಳ ಜೊತೆಗೂಡಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಹಾಗೂ
ಪ್ರತಿನಿತ್ಯ 100 ರಿಂದ 200 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿವೆಂದು ಬೇಸರ ವ್ಯಕ್ತಪಡಿಸಿದರು.

Leave a Comment