ನಗರದಲ್ಲಿ ಖಾದಿ ಉತ್ಸವ ನಾಳೆಯಿಂದ

ಕಲಬುರಗಿ ಸ 14: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ವಿವಿಧ ಇಲಾಖೆ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಉದ್ದೇಶದ  15 ದಿನಗಳ ಖಾದಿ ಉತ್ಸವವನ್ನು ನಾಳೆ ( ಸಪ್ಟೆಂಬರ್ 15)ಯಿಂದ ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡಿದೆ

ಉತ್ಸವದಲ್ಲಿ ರಾಜ್ಯದ ಸುಮಾರು 75 ಮಳಿಗೆಗಳು 5 ಹೊರ ರಾಜ್ಯಗಳ ಮಳಿಗೆಗಳು ಪಾಲ್ಗೊಳ್ಳಲಿವೆ.ಅರಳೆ,ಪಾಲಿ ಉಣ್ಣೆ ಖಾದಿಯ ಮೇಲೆ ಶೇ 30 ರಿಂದ 35 ಮತ್ತು ರೇಷ್ಮೆ ಖಾದಿಯ ಮೇಲೆ ಶೇ 25 ರಿಯಾಯತಿ ನೀಡಲಾಗುವದು .ಉತ್ಸವದಲ್ಲಿ ಖಾದಿಯ ಸಿದ್ಧ ಉಡುಪುಗಳು,ಹೊದಿಕೆ ,ಜೇನುತುಪ್ಪ , ತಿಂಡಿತಿನಿಸುಗಳು,ದೈನಂದಿನ ಗೃಹ ಬಳಕೆ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳು ಒಂದೇ ಸೂರಿನಡಿ ಲಭ್ಯ ಇರುತ್ತವೆ ಎಂದು ಮಂಡಳಿಯ ಅಭಿವೃದ್ಧಿ ಅಧಿಕಾರಿಗಳಾದ  ಅಣ್ಣಪ್ಪ,ಮತ್ತು  ರಾಜಣ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಪ್ಟೆಂಬರ್15 ರಂದು ಸಂಜೆ 4 ಗಂಟೆಗೆಸಣ್ಣ ಕೈಗಾರಿಕೆ ಸಚಿವ, ಮಂಡಳಿಯ  ಅಧ್ಯಕ್ಷ ಎಸ್ ಆರ್ ಶ್ರೀನಿವಾಸ(ವಾಸು) ಉತ್ಸವಕ್ಕೆ ಚಾಲನೆ ನೀಡುವರು.ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ  ಮಳಿಗೆ ಉದ್ಘಟಿಸುವರು. ಸಂಸದ ಮಲ್ಲಿಕಾರ್ಜುನ ಖರ್ಗೆ, ಬೀದರ ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಶಾಸಕರು ಜನಪ್ರತಿನಿಧಿಗಳು ಸರಕಾರದ ಉನ್ನತ ಅಧಿಕಾರಿಗಳು ಉಪಸ್ಥಿತರಿರುವರು ಎಂದರು. ಸೋಮನಾಥ,ಕೃಷ್ಣಮೂರ್ತಿಕುಲಕರ್ಣಿ,ಅಮೃತ ಬಿರಾದಾರ ಸುದ್ದಿಗೋಷ್ಠಿಯಲ್ಲಿದ್ದರು..

Leave a Comment