ನಗರಕ್ಕೆ ಆಗಮಿಸಿದ ಮಹರ್ಷಿ ವಾಲ್ಮೀಕಿ ಪ್ರತಿಮೆ

ಬಳ್ಳಾರಿ, ಡಿ.5: ನಗರದ ವಾಲ್ಮೀಕಿ ಭವನದ ಮುಂದೆ ಪ್ರತಿಷ್ಠಾಪಿಸಲು ಮಹಾರಾಷ್ಟ್ರದ ಕೊಲ್ಹಾಪುರದ ಶಿಲ್ಪಿಗಳಿಂದ ರಚಿಸಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಇಂದು ನಗರಕ್ಕೆ ತರಲಾಯಿತು.

ಅಂದಾಜು 9 ಅಡಿ ಎತ್ತರದ 18.5 ಲಕ್ಷ ರೂಪಾಯಿ ವೆಚ್ಚದಿಂದ ರಚಿಸಿರುವ ಈ ಪುತ್ಥಳಿಯನ್ನು ಬೆಳಿಗ್ಗೆ ಅಲ್ಲಿಪುರ ಬಳಿಯ ವಾಲ್ಮೀಕಿ ಗುರುಕುಲಾಶ್ರಮದಿಂದ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ವಾಲ್ಮೀಕಿ ಸರ್ಕಲ್, ಗವಿಯಪ್ಪ ವೃತ್ತದ ಮೂಲಕ ವಾಲ್ಮೀಕಿ ಭವನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಗಿರಿಮಲ್ಲಪ್ಪ, ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಶಾನವಾಸಪುರ ದೊಡ್ಡ ಯರಿಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಕೃಷ್ಣ, ಸಮುದಾಯದ ವಿವಿಧ ಮುಖಂಡರು, ಜನತೆ ಬಂದು ಪುತ್ಥಳಿಯನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

Leave a Comment