ನಕ್ಸಲರಿಂದ ಬಾಲಕಿ ರಕ್ಷಿಸಿದ ಪೊಲೀಸರು

ಲತೇಹರ್(ಜಾರ್ಖಂಡ್),ಸೆ.೧೨- ಒತ್ತಾಯದಿಂದ ನಕ್ಸಲ್ ಗುಂಪಿಗೆ ಸೇರಿಸಿಕೊಂಡಿದ್ದ ಅಪ್ರಾಪ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.

ಇಲ್ಲಿನ ಲತೇಹರ್‌ನ ಗ್ರಾಮವೊಂದರ ಬಾಲಕಿಯನ್ನು ಒತ್ತಾಯವಾಗಿ ನಕ್ಸಲ್ ಶಿಬಿರಕ್ಕೆ ಸೇರಿಸಿಕೊಂಡಿದ್ದು ಅಲ್ಲದೇ, ಆಕೆಯನ್ನು ಮದುವೆಯಾಗಬೇಕು ಎಂಬ ಉದ್ದೇಶವನ್ನು ನಕ್ಸಲ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ನಕ್ಸಲರು ಬಾಲಕಿಗೆ ತನ್ನ ಗ್ರಾಮದ ಇತರ ಗ್ರಾಮಸ್ಥರನ್ನು ನಕ್ಸಲ್ ಗುಂಪಿಗೆ ಸೇರಿಸಲು ಜಾಗೃತಿ ಮೂಡಿಸುವಂತೆಯೂ ಒತ್ತಡ ಹೇರುತ್ತಿದ್ದರು ಎಂದು ಯುವತಿ ಪೊಲೀಸರ ಬಳಿ ಅವಲತ್ತುಕೊಂಡಿದ್ದಾಳೆ.

Leave a Comment