ನಕ್ಷತ್ರವನ್ನು ನುಂಗುತ್ತಿರುವ ದೈತ್ಯ ಕಪ್ಪುರಂಧ್ರ

ಇದೇ ಮೊದಲ ಬಾರಿಗೆ ಭಾರಿಗಾತ್ರದ ಕಪ್ಪು ರಂಧ್ರವೊಂದು ನಕ್ಷತ್ರವನ್ನು ನುಂಗುತ್ತಿರುವ ರೋಚಕ ಖಗೋಳ ವಿಸ್ಮಯವನ್ನು ಖಗೋಳ ವಿಜ್ಞಾನಿಗಳ ಸಂಶೋಧನಾ ತಂಡ ಸೆರೆ ಹಿಡಿದಿದೆ.

೧೫೦ ದಶಲಕ್ಷ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ದೈತ್ಯಾಕಾರದ ಕಪ್ಪುರಂಧ್ರ ನಕ್ಷತ್ರವೊಂದನ್ನು ನುಂಗುತ್ತಿರುವ ದೃಶ್ಯವನ್ನು ಖಗೋಳ ವಿಜ್ಞಾನಿಗಳ ತಂಡ ವೀಕ್ಷಿಸಿದೆ.

ಈ ಕಪ್ಪುರಂಧ್ರದ ವಿಸ್ತಾರ ಸೂರ್ಯನಿಗಿಂತ ೨೦ ದಶಲಕ್ಷ ಪಟ್ಟು ದೊಡ್ಡದಾಗಿದ್ದು, ನುಂಗುತ್ತಿರುವ ನಕ್ಷತ್ರದ ಗಾತ್ರ ಸೂರ್ಯನ ದುಪ್ಪಟ್ಟು ವಿಸ್ತಾರ ಹೊಂದಿದೆ ಎಂದು ಸಂಶೋಧನಾ ತಂಡ ಹೇಳಿದೆ.

೧೫೦ ದಶಲಕ್ಷ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಈ ಕಪ್ಪು ರಂಧ್ರ ತನ್ನಲ್ಲಿರುವ ಅಗಾದ ಗುರುತ್ವಾಕರ್ಷಣೆಯಿಂದ ನಕ್ಷತ್ರವೊಂದನ್ನು ನುಂಗುತ್ತಿರುವ ದೃಶ್ಯವನ್ನು ಸ್ಪೇನಿನ ಕಭೌತ ವಿಜ್ಞಾನ ಕೇಂದ್ರ ಮತ್ತು ಫಿನ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ.

ಈ ಕಪ್ಪು ರಂಧ್ರದ ವಿಸ್ತಾರ ಸೂರ್ಯನಿಗಿಂತ ೨೦ ದಶಲಕ್ಷಪಟ್ಟು ದೊಡ್ಡದ್ದಾಗಿದ್ದು, ಸೂರ್ಯನಿಗಿಂತ ದುಪ್ಪಟ್ಟು ದೊಡ್ಡದಾಗಿರುವ ನಕ್ಷತ್ರವನ್ನು ನುಂಗುವಂತ ಖಗೋಳ ವಿಸ್ಮಯವನ್ನು ಸಂಶೋಧನಾ ತಂಡ ಸಾಕ್ಷೀಕರಿಸಿದೆ.

24vichara2

ವಿಲಿಯಂ ಹರ್ಷಲ್ ಶಕ್ತಿಶಾಲಿ ದೂರದರ್ಶಕವನ್ನು ಬಳಸಿ ಈ ಕಪ್ಪು ರಂಧ್ರವನ್ನು ೨೦೦೫ರಲ್ಲೆ ಪತ್ತೆ ಮಾಡಲಾಗಿತ್ತು.

ನಂತರದಲ್ಲಿ ಅದರ ಮೇಲೆ ತೀವ್ರ ನಿಗಾವಹಿಸಿದ್ದ ಸಂಶೋಧನಾ ಅಂತಿಮ ಹಂತವಾಗಿ ಅದು ನಕ್ಷತ್ರವನ್ನು ಆಪೋಷಣೆ ಮಾಡಿದ ಇಡೀ ಘಟನೆಗಳನ್ನು ತಂಡ ಗಮನಿಸಿದೆ.

ಕಪ್ಪು ರಂಧ್ರದೊಳಕ್ಕೆ ಸೇರಿ ಹೋಗುವ ನಕ್ಷತ್ರದಿಂದ ಹೊರಗುಳಿಯುವ ಅಲ್ಪಸ್ವಲ್ಪ ಭಾಗ ಕಪ್ಪುರಂಧ್ರದ ಸುತ್ತ ಉಂಗುರಾಕಾರದ ಸುರುಳಿಯಾಗಿ ಪರಿವರ್ತನೆಯಾಗಿ ಈ ಸುರುಳಿ ಅತಿ ಶಕ್ತಿಶಾಲಿ ಎಕ್ಸ್‌ರೇ ಹೊರ ಸೂಸುತ್ತವೆ.

ಸೂರ್ಯನಿಗಿಂತ ಹೆಚ್ಚು ಗಾತ್ರದ ನಕ್ಷತ್ರದ ಅವಸಾನದ ಅಂತಿಮ ರೂಪವೇ ಕಪ್ಪುರಂಧ್ರ (ಬ್ಲಾಕ್ ಹೋಲ್) ಅವಸಾನ ಸ್ಥಿತಿಯಲ್ಲಿರುವ ನಕ್ಷತ್ರದ ಶೇಷಭಾಗ ಗರಿಷ್ಠ ಪ್ರಮಾಣದಲ್ಲಿದ್ದಾಗ ಅದು ಕಪ್ಪು ರಂಧ್ರವಾಗಿ ಮಾರ್ಪಡುತ್ತದೆ.

ಇದರಲ್ಲಿಯ ಗುರುತ್ವಾಕರ್ಷಣೆಗೆ ಸಿಕ್ಕಿ ಇದರ ಒಳಕ್ಕೆ ಹೋಗುವ ಯಾವುದೇ ವಸ್ತುವನ್ನು ಅದರ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೊರ ಬರುವ ಸಾಧ್ಯತೆ ಇಲ್ಲ. ವಸ್ತುಗಳಷ್ಟೇ ಅಲ್ಲ ಆ ಸುಳಿಗೆ ಸಿಕ್ಕ ಬೆಳಕೂ ಕೂಡ ಹೊರ ಬರುವುದಿಲ್ಲ.

ಗುರುತ್ವಾಕರ್ಷಣಾ ಸಮತೋಲನವನ್ನು ಕಳೆದುಕೊಂಡ ನಕ್ಷತ್ರ ಅವಸಾನ ಸ್ಥಿತಿಯತ್ತ ನಡೆಯುತ್ತ ಸಾಗುತ್ತದೆ. ಇದು ಆ ತಾರೆಯಲ್ಲಿಯ ವಸ್ತು ಸಂಕುಚಿತಗೊಳುತ್ತ ಹೋಗುತ್ತದೆ.ಯಾವುದೋ ಒಂದು ಹಂತದಲ್ಲಿ ಅದರಲ್ಲಿರುವ ಪರಮಾಣು ಇಂಧನದ ಪ್ರಮಾಣ ಕಡಿಮೆಯಾಗಿ   ಆ ತಾರೆಯ ಮಧ್ಯಭಾಗದ ಉಷ್ಣಾಂಶ ಇಳಿಯುತ್ತದೆ. ಇದರಿಂದಾಗಿ ಗುರುತ್ವಾಕರ್ಷಣಾ ಶಕ್ತಿ ಆ ತಾರೆಯನ್ನು ಸೆಳೆಯಲು ಆರಂಭಿಸುತ್ತದೆ.

ಕ್ರಮೇಣ  ನಕ್ಷತ್ರ ಕುಸಿಯಲಾರಂಭಿಸುತ್ತದೆ. ತಾರೆಯೊಳಗಿನ ಅಣುಗಳು ವಿಭಜನೆಗೊಂಡು ಎಲೆಕ್ಟ್ರಾನ್‌ಗಳು   ಪ್ರೊಟ್ರಾನ್ ಮತ್ತು ನ್ಯೂಟ್ರಾನ್‌ಗಳಾಗುತ್ತವೆ. ಒಂದು ಹಂತದಲ್ಲಿ ಈ ತಾರೆ ವಿಕಿರಣ ಹೊರ ಸೂಸುವುದೇ ನಿಂತು ಹೋಗುತ್ತದೆ. ಆಗ ಅದು ಬ್ಲಾಕ್ ಹೋಲ್ ಸ್ಥಿತಿ ತಲುಪಿ ತನ್ನ ಮೂಲ ಸ್ಥಿತಿಯಲ್ಲಿದ್ದ ಗುರುತ್ವಾಕರ್ಷಣಾ ಶಕ್ತಿಯ ೧೦೦,೦೦೦,೦೦೦,೦೦ ಪಟ್ಟು ಹೆಚ್ಚಾಗುತ್ತದೆ.

ಉತ್ತನೂರು ವೆಂಕಟೇಶ್

Leave a Comment