ನಕಲಿ ಸಿಬಿಐ ಅಧಿಕಾರಿ ಸೆರೆ ೩೪ ಲಕ್ಷ ನಗದು ಬೆಂಜ್ ಕಾರುಗಳ ವಶ

ಬೆಂಗಳೂರು,ನ.೨೨-ಸಾರ್ವಜನಿಕರನ್ನು ಸಿಬಿಐ ಅಧಿಕಾರಿಯೆಂದು ಬೆದರಿಸಿ ವಂಚನೆ ನಡೆಸುತ್ತಿದ್ದ ನಕಲಿ ಸಿಬಿಐ ಅಧಿಕಾರಿಯೊಬ್ಬನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೨೪ ಲಕ್ಷ ನಗದು ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ನಕಲಿ ಸಿಬಿಐ ಅಧಿಕಾರಿ ಅಭಿಲಾಷ್(೩೪)ನಿಂದ ೨೪ ಲಕ್ಷ ರೂ ನಗದು ಎರಡು ಮರ್ಸಿಡಿಸ್ ಬೆಂಜ್ ಕಾರುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ಪಾಟೀಲ್ ತಿಳಿಸಿದ್ದಾರೆ.

ಬಂಧಿತ ಅಭಿಲಾಷ್ ತಾನು ಸಿಬಿಐ ಅಧಿಕಾರಿ ಎಂದು ಪೋಸ್ ಕೊಡುತ್ತಾ ಕೇಸ್ ದಾಖಲಿಸುವುದಾಗಿ ಉದ್ಯಮಿಗಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದು ಈ ಸಂಬಂಧ ಬಂದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Leave a Comment